HomeIndiaBREAKING : ಟಿ- 20 ವಿಶ್ವಕಪ್ ಗೆದ್ದ 'ಟೀಂ ಇಂಡಿಯಾ' ಆಟಗಾರರನ್ನು ಸನ್ಮಾನಿಸಿದ ಪ್ರಧಾನಿ ಮೋದಿ...

BREAKING : ಟಿ- 20 ವಿಶ್ವಕಪ್ ಗೆದ್ದ ‘ಟೀಂ ಇಂಡಿಯಾ’ ಆಟಗಾರರನ್ನು ಸನ್ಮಾನಿಸಿದ ಪ್ರಧಾನಿ ಮೋದಿ |Video

ನವದೆಹಲಿ : ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿದ ಟೀ ಇಂಡಿಯಾ ಆಟಗಾರರು ಇಂದು ಪ್ರಧಾನಿ ಮೋದಿ ನಿವಾಸಕ್ಕೆ ಭೇಟಿ ನೀಡಿದ್ದು, ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದ್ದಾರೆ.

ಪ್ರಧಾನಿ ಮೋದಿಯನ್ನು ಭೇಟಿಯಾದ ಆಟಗಾರರು ಅವರ ಜೊತೆ ಉಪಹಾರ ಸೇವಿಸಿದರು. ನಂತರ ವಿಶ್ವಕಪ್ ಹಿಡಿದು ಪ್ರಧಾನಿ ಮೋದಿ ಅವರ ಜೊತೆ ಕೆಲಹೊತ್ತು ಮಾತುಕತೆ ನಡೆಸಿದರು.

ಟೀಂ ಇಂಡಿಯಾ ಆಟಗಾರರಿಗೆ ಗುರುವಾರ ಸಂಜೆ ವಿಜಯಯಾತ್ರೆ ಆಯೋಜಿಸಲಾಗಿದೆ. ಮುಂಬೈನ ವಾಂಖಡಡೆ ಸ್ಟೇಡಿಯಂ ನಲ್ಲಿ ಸಂಜೆ 5 ಗಂಟೆಗೆ ಭಾರತ ತಂಡದ ಆಟಗಾರರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟೀಮ್ ಇಂಡಿಯಾ ಆಟಗಾರರು ವಿಶ್ವಕಪ್ ನೊಂದಿಗೆ ಇಂದು ತವರಿಗೆ ಮರಳಿದ್ದು, ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರರಿಗೆ ಅದ್ದೂರಿ ಸ್ವಾಗತ ನೀಡಿ ವಿಜಯೋತ್ಸವ ಆಚರಿಸಲಾಗಿದೆ.ನಂತರ ಕೇಕ್ ಕತ್ತರಿಸಿ ಆಟಗಾರರು ಸಂಭ್ರಮಾರಣೆ ನಡೆಸಿದರು. ನಂತರ ಇಂದು ಟೀಂ ಇಂಡಿಯಾ ಆಟಗಾರರು ಪ್ರಧಾನಿ ಮೋದಿ ನಿವಾಸಕ್ಕೆ ಆಗಮಿಸಿದ್ದಾರೆ.

ಜೂನ್ 29 ರಂದು, ಐಸಿಸಿ ಪುರುಷರ T20 ವಿಶ್ವಕಪ್ 2024 ಫೈನಲ್ನಲ್ಲಿ ಭಾರತವು ಬಾರ್ಬಡೋಸ್ನಲ್ಲಿ ಏಡೆನ್ ಮಾರ್ಕ್ರಾಮ್ ನೇತೃತ್ವದ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳಿಂದ ಸೋಲಿಸಿತು.ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಇತರ ಸದಸ್ಯರು ಬಾರ್ಬಡೋಸ್ನಿಂದ ಆಗಮಿಸಿದ್ದಾರೆ. ಜೂನ್ 30 ರಿಂದ ಬೆರಿಲ್ ಚಂಡಮಾರುತದ ಕಾರಣದಿಂದಾಗಿ ಆಗಮನ ವಿಳಂಬವಾಗಿತ್ತು.ಚಂಡಮಾರುತ ದಿಂದಾಗಿ ಬಾರ್ಬಡೋಸ್ ನಲ್ಲಿ ಟೀಮ್ ಇಂಡಿಯಾ ಆಟಗಾರರು ಉಳಿದುಕೊಂಡಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular