HomeEntertainment'ಸಂಭವಾಮಿ ಯುಗೇ ಯುಗೇ' ಚಿತ್ರದ 'ಗಾಯವಾದ ಹೃದಯ' ಹಾಡು ರಿಲೀಸ್

‘ಸಂಭವಾಮಿ ಯುಗೇ ಯುಗೇ’ ಚಿತ್ರದ ‘ಗಾಯವಾದ ಹೃದಯ’ ಹಾಡು ರಿಲೀಸ್

ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದ ಜೈ ಶೆಟ್ಟಿ ಅಭಿನಯದ ‘ಸಂಭವಾಮಿ ಯುಗೇ ಯುಗೇ’ ಚಿತ್ರದ ಗಾಯವಾದ ಹೃದಯ ಎಂಬ ಹಾಡು ಆನಂದ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಪ್ರಕಾಶ್ ಧ್ವನಿಯಾಗಿದ್ದು, ಪುರಾಣ ಶೆಟ್ಟಿಗಾರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಮಹೇಶ್ ರಾಮ್ ಸಾಹಿತ್ಯವಿದೆ.

ಈ ಚಿತ್ರವನ್ನು ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಶ್ರೀಮತಿ ಪ್ರತಿಭಾ ನಿರ್ಮಾಣ ಮಾಡಿದ್ದು, ಜೈ ಶೆಟ್ಟಿ ಸೇರಿದಂತೆ ಸುಧಾರಾಣಿ, ಪ್ರಮೋದ್ ಶೆಟ್ಟಿ, ಅಶೋಕ್ ಕುಮಾರ್, ಭವ್ಯ, ನಿಶಾ ರಾಜಪೂತ್, ಮಧುರ ಗೌಡ ಹಾಗೂ ಅಭಯ್ ಪುನೀತ್ ತೆರೆ ಹಂಚಿಕೊಂಡಿದ್ದಾರೆ. ರವೀಶ್ ಆತ್ಮಾ ರಾಮ್ ಸಂಕಲನ, ಗೀತಾ ನೃತ್ಯ ನಿರ್ದೇಶನ, ಹಾಗೂ ನರಸಿಂಹ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular