HomeKarnatakaಡಿಜೆ ಸಾಂಗ್ ಗೆ ಡಾನ್ಸ್ ವಿಚಾರವಾಗಿ ಗಲಾಟೆ; ಎರಡು ಕೋಮುಗಳ ನಡೆವೆ ಸಂಘರ್ಷ; ಹಲ್ಲೆ

ಡಿಜೆ ಸಾಂಗ್ ಗೆ ಡಾನ್ಸ್ ವಿಚಾರವಾಗಿ ಗಲಾಟೆ; ಎರಡು ಕೋಮುಗಳ ನಡೆವೆ ಸಂಘರ್ಷ; ಹಲ್ಲೆ

ಕಲಬುರ್ಗಿ: ಡಿಜೆ ಸಾಂಗ್ ವಿಚಾರವಾಗಿ ನಡೆದ ಗಲಾಟೆ ಕೋಮು ಸಂಘರ್ಷಕ್ಕೆ ತಿರುಗಿದ್ದು, ಘಟನೆಯಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಡಿಜೆ ಸಾಂಗ್ ಗೆ ಡಾನ್ಸ್ ಮಾಡಿದ ವಿಚಾರವಾಗಿ ಎರಡು ಕೋಮಿನ ನಡುವೆ ಗಲಾಟೆ ನಡೆದಿದೆ. ರಾಮಮಂದಿರ ಕುರಿತ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಇನ್ನೊಂದು ಕೋಮಿನ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ಗಲಾಟೆ ನಡೆದಿದ್ದು, ಭೀಮಾಶಂಕರ್ ಎಂಬಾತನ ಮೇಲೆ ಅನ್ಯಕೋಮಿನ ಗುಂಪು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ಗುಲಬುರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಾಳು ಭೀಮಾಶಂಕರ್ ನನ್ನು ಆಸ್ಪತ್ರೆಗೆ ದಾಖಲಿಇಸಲಾಗಿದೆ. ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಗಾಯಾಳು ವ್ಯಕ್ತಿಯ ತಾಯಿ ದೂರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular