HomeEntertainmentಆಗಸ್ಟ್ 9ಕ್ಕೆ ತೆರೆ ಮೇಲೆ ಬರಲಿದೆ 'ಇದು ಎಂಥಾ ಲೋಕವಯ್ಯಾ'

ಆಗಸ್ಟ್ 9ಕ್ಕೆ ತೆರೆ ಮೇಲೆ ಬರಲಿದೆ ‘ಇದು ಎಂಥಾ ಲೋಕವಯ್ಯಾ’

ಇತ್ತೀಚಿಗಷ್ಟೇ ಮೋಶನ್ ಟೀಸರ್ ಬಿಡುಗಡೆ ಮಾಡಿದ್ದ ‘ಇದು ಎಂಥಾ ಲೋಕವಯ್ಯಾ’ ಚಿತ್ರತಂಡ ಇದೀಗ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಮುಂದಿನ ತಿಂಗಳು ಆಗಸ್ಟ್ 9ಕ್ಕೆ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಕಾಮಿಡಿ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸಿತೇಶ್ ಸಿ ಗೋವಿಂದ್ ನಿರ್ದೇಶಿಸಿದ್ದು, ಕಡ್ಲೆಕಾಯಿ ಫಿಲಂಸ್ ಬ್ಯಾನರ್ ನಲ್ಲಿ ಎಂ ನರೇಶ ಶೆಣೈ  ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ತೂಮಿನಾಡ್, ಅನುರಾಜ್ ಕಕ್ಯಪಡವು, ಮೈತ್ರಿ, ಮೈಮ್ ರಾಮದಾಸ್, ವಿಶ್ವನಾಥ್ ಅಸೈಗೋಳಿ, ಗೋಪಿನಾಥ್ ಸಿಟ್ಭೇಶ್ . ಗೋವಿಂದ್, ದೀಪಕ್ ರೈ ಪಾಣಾಜೆ, ಎಂ.ನರೇಶ ಶೆಣೈ, ಶಶಿರಾಜ್ ಕಾವೂರು, ಚಂದ್ರಹಾಸ್ ಉಳ್ಳಾಲ್, ಸುಕನ್ಯಾ ವೈ.ಬಿ, ಹರೀಶ್ ಬಂಗೇರ,  ಬಣ್ಣ ಹಚ್ಚಿದ್ದಾರೆ. ರಿತ್ವಿಕ್ ಎಸ್. ಚಂದ್‌ ಹಾಗೂ ಶಿಯಾದ್ ಕಬೀರ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular