HomeKarnatakaಸ್ವಾಮೀಜಿ ಸ್ಥಾನ ಬಿಟ್ಟು ಕೊಡಲಿ, ನಾನೇ ಸ್ವಾಮಿ ಆಗ್ತೀನಿ ಎಂದ ಸಚಿವ ಕೆ.ಎನ್.ರಾಜಣ್ಣ

ಸ್ವಾಮೀಜಿ ಸ್ಥಾನ ಬಿಟ್ಟು ಕೊಡಲಿ, ನಾನೇ ಸ್ವಾಮಿ ಆಗ್ತೀನಿ ಎಂದ ಸಚಿವ ಕೆ.ಎನ್.ರಾಜಣ್ಣ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ನೇರವಾಗಿ ಸೂಚಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಕೆ.ಎನ್.ರಾಜಣ್ಣ, ಸ್ವಾಮೀಜಿ ಅವರ ಸ್ಥಾನವನ್ನು ಬಿಟ್ಟುಕೊಡ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ, ಸಿಎಂ ಸ್ಥಾನವನ್ನು ಯಾರು ಯಾಕೆ ಬಿಟ್ಟುಕೊಡಲು ಹೋಗ್ತಾರೆ? ಅವರೂ ಬಿಟ್ಟುಕೊಡಲ್ಲ, ಇವರೂ ಬಿಟ್ಟುಕೊಡಲ್ಲ. ಸ್ವಾಮೀಜಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.

ಸ್ವಾಮೀಜಿ ಅವರು ಸ್ಥಾನ ಬಿಟ್ಟು ಕೊಡ್ತಾರಾ ಕೇಳಿ….. ಸ್ವಾಮೀಜಿ ಸ್ಥಾನ ಬಿಡಲಿ, ನಾನೇ ಸ್ವಾಮಿ ಆಗ್ತೀನಿ. ಸುಮ್ಮನೇ ಏನೋ ಹೇಳಿದರೆ ಆಗಲ್ಲ. ಸ್ಥಾನ ಬಿಟ್ಟುಕೊಡಿ ಎಂದು ಹೇಳಿದ ಮಾತ್ರಕ್ಕೆ ಯಾರೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular