HomeKarnatakaರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮನೆಯೊಂದು ಸಾವಿರ ಬಾಗಿಲಾಗಿದೆ: ಬಿಜೆಪಿ ವಾಗ್ದಾಳಿ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮನೆಯೊಂದು ಸಾವಿರ ಬಾಗಿಲಾಗಿದೆ: ಬಿಜೆಪಿ ವಾಗ್ದಾಳಿ

ಬೆಂಗಳೂರು: ಡಿಸಿಎಂ ಹುದ್ದೆ ಹೆಚ್ಚಳ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಸಚಿವರೇ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ವಿಚಾರವಾಗಿ ಸರ್ಕಾರದ ನಡೆಗೆ ರಾಜ್ಯ ಬಿಜೆಪಿ ಕಿಡಿಕಾರಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಮನೆಯೊಂದು ಸಾವಿರ ಬಾಗಿಲಾಗಿದೆ ಎಂದು ವಾಗ್ದಾಳಿ ನಡೆಸಿದೆ.

ಸರ್ಕಾರ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಬದಲು ಸದಾ ಕುರ್ಚಿ ಜಗಳದಲ್ಲಿಯೇ ಸಿಎಂ ಹಾಗೂ ಡಿಸಿಎಂ ಬಣಗಳು ನಿರತವಾಗಿವೆ ಎಂದು ಬಿಜೆಪಿ ಕಿಡಿಕಾರಿದೆ.

ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ, ಲೂಟಿ ಹೊಡೆಯುವುದರಲ್ಲಿ ಸ್ಪರ್ಧೆಗೆ ಬೀಳುವ ನಿಮ್ಮ ಬಣಗಳು, ಅಭಿವೃದ್ಧಿ ವಿಚಾರ ಬಂದಾಗ ಮೌನವಾಗುವುದು ಏಕೆ? ಲೂಟಿ ಹೊಡೆಯುವುದರಲ್ಲಿ, ಕುರ್ಚಿ ಗಿಟ್ಟಿಸಲು ನಿಮ್ಮ ಬಣಗಳಿಗಿರುವ ಕಾಳಜಿ, ಕೊಂಚ ಕರ್ನಾಟಕದ ಅಭಿವೃದ್ಧಿ ಬಗ್ಗೆ ಸಹ ಇರಲಿ ಎಂದು ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular