90 ನೇ ವಯಸ್ಸಿನಲ್ಲಿ 5ನೇ ಮದುವೆ; ಮತ್ತೆ ತಂದೆಯಾಗುವ ಬಯಕೆಯಲ್ಲಿ ಸೌದಿಯ ವೃದ್ಧ…..!

ಸೌದಿ ಅರೇಬಿಯಾದಲ್ಲಿ 90 ವರ್ಷದ ವೃದ್ಧನೊಬ್ಬ 5ನೇ ಬಾರಿಗೆ ಮದುವೆಯಾಗಿದ್ದಾನೆ. ಈತನ ಹೆಸರು ನಾಸರ್ ಬಿನ್ ದಹೀಮ್ ಬಿನ್ ವಹ್ಕ್ ಅಲ್ ಮುರ್ಷಿದಿ ಅಲ್ ಒತೈಬಿ. ಇಳಿ ವಯಸ್ಸಿನಲ್ಲಿ 5ನೇ ಮದುವೆಯಾಗುವ ಮೂಲಕ ಭಾರೀ ಸುದ್ದಿ ಮಾಡಿದ್ದಾನೆ. ಸೌದಿಯ ಅಫೀಫ್ ಪ್ರಾಂತ್ಯದಲ್ಲಿ ಈ ವಿವಾಹ ನೆರವೇರಿದೆ.

ಸಾಮಾಜಿಕ ಜಾಲತಾಣದಲ್ಲಿ ಈತನಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಖುದ್ದು ಆತನ ಮೊಮ್ಮಗ ಕೂಡ ಶುಭಾಶಯ ಹೇಳಿರೋದು ವಿಶೇಷ.

ಇಳಿವಯಸ್ಸಿನಲ್ಲಿ 5ನೇ ಮದುವೆಯಾಗಿರೋದಕ್ಕೆ ಕಾರಣಗಳನ್ನು ಈತ ಬಹಿರಂಗಪಡಿಸಿದ್ದಾನೆ. ಮದುವೆಯಲ್ಲಿ ಆತನಿಗೆ ಆಳವಾದ ನಂಬಿಕೆಯಂತೆ. ಈತನಿಗೆ ಮತ್ತೆ ಮದುವೆಯಾಗುವ ಬಯಕೆಯೂ ಇದೆ. ವೈವಾಹಿಕ ಜೀವನವು ನಂಬಿಕೆಯ ಕಾರ್ಯ, ಇದು ಜೀವನದಲ್ಲಿ ನೆಮ್ಮದಿ, ಲೌಕಿಕ ಸಮೃದ್ಧಿಯನ್ನು ತರುತ್ತದೆ. ಅದೇ ನನ್ನ  ಉತ್ತಮ ಆರೋಗ್ಯದ ಗುಟ್ಟು ಅಂತಾ ಈ ವೃದ್ಧ ಹೇಳಿಕೊಂಡಿದ್ದಾನೆ.

ಮದುವೆ ಮಾಡಿಕೊಳ್ಳಲು ಹಿಂಜರಿಯುವ ಯುವಕರು ಅದನ್ನು ಸ್ವೀಕರಿಸಿ ಪೂರ್ಣ ಜೀವನವನ್ನು ನಡೆಸಬೇಕೆಂದು ಆತ ಒತ್ತಾಯಿಸಿದ್ದಾನೆ. ಹನಿಮೂನ್‌ನಲ್ಲಿ ತಾನು ಸಂತೋಷವಾಗಿದ್ದೇನೆ, ಮತ್ತು ವೃದ್ಧಾಪ್ಯವು ಮದುವೆಯನ್ನು ತಡೆಯುವುದಿಲ್ಲ ಎಂದೂ ಹೇಳಿದ್ದಾನೆ. ಒತೈಬಿಗೆ ಒಟ್ಟು ಐವರು ಮಕ್ಕಳು, ಅವರಲ್ಲಿ ನಾಲ್ವರು ಬದುಕಿದ್ದಾರೆ. ಒತೈಬಿಗೆ ಮೊಮ್ಮಕ್ಕಳೂ ಇದ್ದಾರೆ. ಮತ್ತೆ ಮತ್ತೆ ಮದುವೆಯಾಗಿ ಮಕ್ಕಳಿಗೆ ತಂದೆಯಾಗುವ ಬಯಕೆ ಈ ಇಳಿವಯಸ್ಸಿನಲ್ಲೂ ಈತನಿಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read