HomeLatest Newsಮ್ಯಾಟ್ರಿಮೋನಿ ಮೂಲಕ ಮದುವೆ ಹೆಸರಲ್ಲಿ 9 ಯುವತಿಯರ ಬಾಳಲ್ಲಿ ಚೆಲ್ಲಾಟ: ವಂಚಕ ಸೇರಿ ಇಬ್ಬರು ಅರೆಸ್ಟ್

ಮ್ಯಾಟ್ರಿಮೋನಿ ಮೂಲಕ ಮದುವೆ ಹೆಸರಲ್ಲಿ 9 ಯುವತಿಯರ ಬಾಳಲ್ಲಿ ಚೆಲ್ಲಾಟ: ವಂಚಕ ಸೇರಿ ಇಬ್ಬರು ಅರೆಸ್ಟ್

ಮಂಗಳೂರು: ಮ್ಯಾಟ್ರಿಮೋನಿ ಆನ್ಲೈನ್ ವೇದಿಕೆ ಮೂಲಕ ಮದುವೆಯ ಹೆಸರಲ್ಲಿ 9 ಯುವತಿಯರ ಬಾಳಲ್ಲಿ ಚೆಲ್ಲಾಟವಾಡಿದ್ದ ಆರೋಪಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಮ್ಯಾಟ್ರಿಮೋನಿ ಸೈಟ್ ನಲ್ಲಿ ಯುವತಿಯರ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಒಂಬತ್ತು ಯುವತಿಯರಿಗೆ ವಂಚಿಸಿದ ಆರೋಪಿಯನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಶಾಂತ್ ಪೂಜಾರಿ(32) ಬಂಧಿತ ಆರೋಪಿಯಾಗಿದ್ದಾನೆ. ಉಡುಪಿಯ ಯುವತಿಯನ್ನು 2021ರಲ್ಲಿ ಮದುವೆಯಾಗಿದ್ದ ಆರೋಪಿ ಸುಶಾಂತ್ ಪೂಜಾರಿ ನಂತರ ಮಹಾರಾಷ್ಟ್ರದ ಘನಸೋಳಿಯ ಯುವತಿಯನ್ನು 2025 ರ ಫೆಬ್ರವರಿ 2ರಂದು ನವಿ ಮುಂಬೈನಲ್ಲಿ ಮದುವೆಯಾಗಿದ್ದ ಆರೋಪಿ ಯುವತಿಯಿಂದ 6.60 ಲಕ್ಷ ರೂ. ಪಡೆದು ನಾಪತ್ತೆಯಾಗಿದ್ದ.

ಯುವತಿ ಆತನ ಹಿನ್ನೆಲೆ ವಿಚಾರಿಸಿದಾಗ ಆತನಿಗೆ ಮೊದಲೇ ಮದುವೆಯಾಗಿ ಅನೇಕ ಯುವತಿಯರನ್ನು ವಂಚಿಸಿರುವುದು ಗೊತ್ತಾಗಿದೆ. ಯುವತಿ ಕಾವೂರು ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿ ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2021ರಲ್ಲಿ ಉಡುಪಿ ಯುವತಿ ಜೊತೆಗೆ ಸುಶಾಂತ್ ಮದುವೆಯಾಗಿದ್ದು, ಮುಂಬೈ, ಉಡುಪಿ, ಬೆಂಗಳೂರಿನ ತಲಾ ಇಬ್ಬರು ಯುವತಿಯರು, ಕಾರ್ಕಳದ ಒಬ್ಬ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ನವೀ ಮುಂಬೈನಲ್ಲಿ ಮದುವೆಯಾಗಲು ನೆರವಾಗಿದ್ದ, ಸುಶಾಂತ್ ತನ್ನ ಅಳಿಯನೆಂದು ಹೇಳಿಕೊಂಡು ಮದುವೆಯಲ್ಲಿ ಭಾಗವಹಿಸಿದ್ದ ಮೂಲ್ಕಿ ಕಾರ್ ಚಾಲಕ ಭಾಸ್ಕರ್ ಎಂಬುವನನ್ನು ಕೂಡ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular