ಉಡುಪಿ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆಯ ನೆಪದಲ್ಲಿ ಹಣ ಪಡೆದು ನಂತರ ಖಾಸಗಿ ವಿಡಿಯೋ ಬಹಿರಂಗಪಡಿಸುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಜೀನತ್ ಇಬ್ರಾಹಿಂ ಬಂಧಿತ ಆರೋಪಿಯಾಗಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಅವರ ಮೇಲೆ ಎಂಟು ಪ್ರಕರಣ ದಾಖಲಾಗಿವೆ ಎಂದು ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಉದ್ಯಮಿಯೊಬ್ಬರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಲು ಜೀನತ್ ಇಬ್ರಾಹಿಂಗೆ 70 ಲಕ್ಷ ರೂ. ನೀಡಿದ್ದು, ಹಣ ವಾಪಸ್ ಕೇಳಿದಾಗ ಬೆದರಿಕೆ ಹಾಕಿದ್ದಾಳೆ. ಇದೇ ರೀತಿಯ ವಿಡಿಯೋ ಇಟ್ಟುಕೊಂಡು ಇನ್ನೂ ಹಲವರಿಗೆ ಹನಿ ಟ್ರ್ಯಾಪ್ ಮತ್ತು ಬ್ಲಾಕ್ಮೇಲ್ ಮಾಡಿದ್ದಾಳೆ. ಜೀನತ್ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಐದು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಜೀನತ್ ಮೇಲೆ ಈಗಾಗಲೇ 7 ಚೆಕ್ ಬೌನ್ಸ್ ಪ್ರಕರಣಗಳು ಇರುವುದು ಕಂಡು ಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ.

