Cute Video | ಗಿಟಾರ್‌ ವಾದ್ಯದಿಂದ ನೆಟ್ಟಿಗರ ಮನಸೂರೆಗೊಂಡ ಏಳರ ಪೋರ

ಮಕ್ಕಳು ಎಲ್ಲಾ ವಿಚಾರದಲ್ಲೂ ನಮಗಿಂತ ಭಾರೀ ಮುಂದಿದ್ದು, ಆಯ್ಕೆಗಳ ವಿಚಾರದಲ್ಲಿ ಅದೆಷ್ಟು ಸ್ಪಷ್ಟತೆ ಹೊಂದಿದ್ದಾರೆ ಎಂಬುದನ್ನು ನಾವು ನೋಡುತ್ತಲೇ ಬಂದಿದ್ದೇವೆ.

ಏಳು ವರ್ಷದ ಬಾಲಕನೊಬ್ಬ ತನ್ನ ಗಿಟಾರ್‌ ಕೌಶಲ್ಯದಿಂದ ಆನ್ಲೈನ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾನೆ. ’ಗನ್ಸ್‌ ಅಂಡ್ ರೋಸಸ್‌’ನ ’ಸ್ವೀಟ್ ಚೈಲ್ಡ್ ಓ ಮೈನ್’ ಹಾಡಿನ ಟ್ಯೂನ್‌ ಅನ್ನು ಗಿಟಾರ್‌ನಲ್ಲಿ ನುಡಿಸುವ ಮೂಲಕ ಈ ಬಾಲಕ ಸದ್ದು ಮಾಡಿದ್ದಾನೆ.

ಲಿಯೊನಾರ್ಡೋ ಹೆಸರಿನ ಈ ಬಾಲಕ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ಈ ಗಿಟಾರ್‌ ವಾದನವನ್ನು ಶೇರ್‌ ಮಾಡಿಕೊಂಡಿದ್ದಾನೆ. ಈ ವಿಡಿಯೋಗೆ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಸಂದಾಯವಾಗಿವೆ.

https://youtu.be/EW9XobzMulk

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read