ಭಾರತೀಯ ವಾಯುಪಡೆಯ ಅಧಿಕಾರಿ ಶುಭಾಂಶು ಶುಕ್ಲಾ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ 14 ದಿನಗಳ ಕಾರ್ಯಾಚರಣೆಯನ್ನು ಮುಗಿಸುತ್ತಿದ್ದು, ನಾಳೆ ಬಳಿಕ ಭೂಮಿಗೆ ವಾಪಸ್ ಆಗಲಿದ್ದಾರೆ. ಜೂನ್ 25 ರಂದು ಪ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಐಎಸ್ಎಸ್ಗೆ ಪ್ರಯಾಣ ಬೆಳೆಸಿದ್ದರು.
ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಜುಲೈ 10 ರ ನಂತರ ಭೂಮಿಗೆ ಮರಳಲು ಸಜ್ಜಾಗಿದ್ದಾರೆ. ವಿಶೇಷವಾಗಿ 25 ವರ್ಷಗಳಷ್ಟು ಹಳೆಯದಾದ ಸೂಕ್ಷ್ಮ ಗುರುತ್ವಾಕರ್ಷಣ ಪ್ರಯೋಗಾಲಯದಲ್ಲಿ ಪಾದಾರ್ಪಣೆ ಮಾಡಿದ ಭಾರತಕ್ಕೆ ಇದು ಮಹತ್ವದ್ದಾಗಿದೆ.
ನಾಲ್ವರು ಸ್ಟೆಮ್ ಸೆಲ್, ಬಾಹ್ಯಾಕಾಶದಲ್ಲಿ ಮನುಷ್ಯರ ಮೂಳೆ ಸವೆತ, ಗಿಡಗಳನ್ನು ಬೆಳೆಯುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಂಶೋಧನೆ, ಅಧ್ಯಯನ ನಡೆಸಿದ್ದಾರೆ. ಇತ್ತೀಚೆಗೆ ಬಾಹ್ಯಾಕಾಶಕ್ಕೆ ತೆರಳಿದ್ದ ಅಮೆರಿಕಾದ ಸುನಿತಾ ವಿಲಿಯಮ್ಸ್ ಸೇರಿದಂತೆ ನಾಲ್ವರು ಗಗನಯಾನಿಗಳು ಅಮೆರಿಕಾದ ಸಮುದ್ರದಲ್ಲಿ ಲ್ಯಾಂಡ್ ಆಗಿದ್ದರು. ಅದೇ ರೀತಿ ಈಗ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಅಮೆರಿಕಾದ ಸಮುದ್ರದಲ್ಲಿ ಪ್ಲ್ಯಾಶ್ ಡೌನ್ ಮಾಡಲಿದ್ದಾರೆ.