ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಶಾಂತಿಯುತವಾಗಿ ನಡೆದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ. 68.43ರಷ್ಟು ಮತದಾನವಾಗಿದೆ. ಬಾಗಲಕೋಟೆಯಲ್ಲಿ ಶೇಕಡ 68.74 ರಷ್ಟು ಮತದಾನವಾಗಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಬಾಗಲಕೋಟೆಯಲ್ಲಿ ಶೇಕಡ 68.69ರಷ್ಟು ಪುರುಷರು, ಶೇಕಡ 68.68ರಷ್ಟು ಮಹಿಳೆಯರು, ಶೇ. 0.07ರಷ್ಟು ತೃತೀಯ ಲಿಂಗಿಗಳು ಮತ ಚಲಾಯಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇಕಡ 68.55 ರಷ್ಟು ಪುರುಷರು, ಶೇಕಡ 68.55 ರಷ್ಟು ಮಹಿಳೆಯರು, ಶೇ. 0.08ರಷ್ಟು ತೃತೀಯ ಲಿಂಗಿಗಳು ಮತ ಚಲಾಯಿಸಿದ್ದಾರೆ. ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮೇ 4ರಂದು ಮತ ಎಣಿಕೆ ನಡೆಯಲಿದ್ದು, ಸೋಲು ಗೆಲುವಿನ ಲೆಕ್ಕಾಚಾರಕ್ಕೆ ತೆರೆ ಬೀಳಲಿದೆ.

