ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ದಿಮೆ ಮಳಿಗೆಗಳು ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ ಭಾಷೆಯಲ್ಲಿ ನಾಮಫಲಕವನ್ನು ಅಳವಡಿಸಬೇಕು.
ಒಂದು ವೇಳೆ ಶೇ.60 ಕ್ಕಿಂತ ಕಡಿಮೆ ಕನ್ನಡ ಭಾಷೆ ಬಳಿಕೆ ಮಾಡಿ ನಾಮಫಲಕ ಹಾಕಿದ್ದಲ್ಲಿ, ಅಂತಹ ನಾಮಫಲಕವನ್ನು ತೆರವುಗೊಳಿಸಲಾಗುವುದು ಹಾಗೂ ದಂಡವನ್ನು ಪಾಲಿಕೆಯಿಂದ ವಿಧಿಸಲಾಗುವುದು. ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ದಿಮೆ ಮಾಲೀಕರು ತಮ್ಮ ವಾಣಿಜ್ಯ ಮಳಿಗೆಗಳಿಗೆ ನಾಮಫಲಕವನ್ನು ಕಡ್ಡಾಯವಾಗಿ ಶೇ.60 ರಷ್ಡು ಕನ್ನಡ ಭಾಷೆಯಲ್ಲಿ ಅಳವಡಿಸಬೇಕು ಹಾಗೂ ನಾಮಫಲಕದಲ್ಲಿ ಊರಿನ ಹೆಸರನ್ನು ನಮೂದಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

