HomeLatest NewsBIG NEWS: ಕಿಡ್ನ್ಯಾಪ್ ಆಗಿದ್ದ 5 ವರ್ಷದ ಬಾಲಕಿ ರಕ್ಷಣೆ: ಸಂಬಂಧಿಕರಿಂದಲೇ ಬಾಲಕಿ ಅಪಹರಣ!

BIG NEWS: ಕಿಡ್ನ್ಯಾಪ್ ಆಗಿದ್ದ 5 ವರ್ಷದ ಬಾಲಕಿ ರಕ್ಷಣೆ: ಸಂಬಂಧಿಕರಿಂದಲೇ ಬಾಲಕಿ ಅಪಹರಣ!

ಬೆಂಗಳೂರು: ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣಕ್ಕೊಳಗಾಗಿದ್ದ 5 ವರ್ಷದ ಬಾಲಕಿಯನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

24 ಗಂಟೆಯೊಳಗೆ ಬಾಲಕಿಯನ್ನು ಪತ್ತೆ ಮಾಡಿ ರಕ್ಷಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಆರೋಗಳು ಅಪಹರಿಸಿ ಸಿಂಧನೂರಿಗೆ ಕರೆದೊಯ್ದಿದ್ದರು. ಬಾಲಕಿ ಪೋಷಕರು ಆರೋಪಿಗಳಿಗೆ ಮೊದಲೇ ಪರಿಚಯದವ ರಾಗಿದ್ದು, ಒಂದೇ ಊರಿನವರು. ಬಾಲಕಿ ಹಾಗೂ ಪೋಷಕರು ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದ್ದಕ್ಕಿದ್ದಂತೆ ಬಾಲಕಿ ಪೋಷಕರಿಗೆ ಹೇಳದೇ ಆರೋಪಿಗಳು ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಸಿಂಧನೂರಿಗೆ ಕರೆದೊಯ್ದಿದ್ದಾರೆ. ಮನೆ ಬಳಿ ಆಟವಾಡುತ್ತಿದ್ದ ಮಗಳು ಕಾಣದಿದ್ದಾಗ ಕಂಗಾಲಾದ ಪೋಷಕರು ಜ್ಞಾನಭಾರತಿ ಠಾಣೆಯಲ್ಲಿ ದೂರು ನೀಡಿದ್ದರು.

ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ ಪೊಲೀಸರಿಗೆ ಬಾಲಕಿಗೆ ಪರಿಚಿತಳಿರುವ ಮಹಿಳೆಯೇ ಆಕೆಯನ್ನು ಎತ್ತಿಕೊಂಡು ಹೋಗಿರುವುದು ಗೊತ್ತಾಗಿದೆ. ತಕ್ಷಣ ರಾಯಚೂರು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸದ್ಯ ಸಿಂಧನೂರಿನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬಾಲಕಿಯನ್ನು ರಕ್ಷಿಸಿ ಸುರಕ್ಷುತವಾಗಿ ಕರೆತಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular