ಓಟ್ ಮೀಲ್ ಕೇವಲ ಆರೋಗ್ಯಕರ ಉಪಹಾರ ಮಾತ್ರವಲ್ಲ, ಇದು ಚರ್ಮದ ಆರೋಗ್ಯಕ್ಕೂ ರಾಮಬಾಣ. ಓಟ್ಸ್‌ನಲ್ಲಿರುವ ಆ್ಯಂಟಿ-ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ (Anti-inflammatory) ಗುಣಗಳು ಮೊಡವೆ, ಶುಷ್ಕ ಚರ್ಮ ಮತ್ತು ಸೂರ್ಯನ ಶಾಖದಿಂದಾದ ಹಾನಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಕಾಸ್ಮೆಟಾಲಜಿಸ್ಟ್ ಡಾ. ಪ್ರೀತಿ ಮಾಹಿರೆ ಅವರ ಪ್ರಕಾರ, ಓಟ್ಸ್‌ನಲ್ಲಿರುವ ಅಮಿನೋ ಆಸಿಡ್ ಮತ್ತು ಸತು (Zinc) ಅಂಶವು ಚರ್ಮದ ಕಲೆಗಳನ್ನು ನಿವಾರಿಸಿ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಗಮನಸೆಳೆಯುವ 5 ಓಟ್ ಮೀಲ್ ಫೇಸ್ ಪ್ಯಾಕ್‌ಗಳು:
- ಜೇನುತುಪ್ಪ, ಹಾಲು ಮತ್ತು ಓಟ್ಸ್ (ಎಲ್ಲಾ ರೀತಿಯ ಚರ್ಮಕ್ಕೆ):
- ವಿಧಾನ: 2 ಚಮಚ ಓಟ್ಸ್, 1 ಚಮಚ ಜೇನುತುಪ್ಪ ಮತ್ತು 2 ಚಮಚ ಹಾಲು ಬೆರೆಸಿ ಪೇಸ್ಟ್ ಮಾಡಿ. ಮುಖಕ್ಕೆ ಹಚ್ಚಿ 20 ನಿಮಿಷದ ನಂತರ ತೊಳೆಯಿರಿ. ಇದು ಚರ್ಮದ ನೈಸರ್ಗಿಕ ತೇವಾಂಶವನ್ನು ಕಾಪಾಡುತ್ತದೆ.
- ಓಟ್ಸ್ ಮತ್ತು ನಿಂಬೆ ರಸ (ಎಣ್ಣೆ ಚರ್ಮ ಮತ್ತು ಮೊಡವೆಗೆ):
- ವಿಧಾನ: 2 ಚಮಚ ಓಟ್ಸ್ ಮತ್ತು 1 ಚಮಚ ನಿಂಬೆ ರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ.
- ಓಟ್ಸ್ ಮತ್ತು ಪಪ್ಪಾಯಿ (ಒರಟು ಚರ್ಮಕ್ಕೆ):
- ವಿಧಾನ: ಮ್ಯಾಶ್ ಮಾಡಿದ ಪಪ್ಪಾಯಿ ಹಣ್ಣಿನ ತುಂಡಿಗೆ 2 ಚಮಚ ಓಟ್ಸ್ ಮತ್ತು 1 ಚಮಚ ಬಾದಾಮಿ ಎಣ್ಣೆ ಸೇರಿಸಿ. ಇದನ್ನು ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ.
- ಓಟ್ಸ್ ಮತ್ತು ಟೊಮೆಟೊ (ಬಿಸಿಲಿಗೆ ಕಪ್ಪಾದ ಚರ್ಮಕ್ಕೆ):
- ವಿಧಾನ: 2 ಚಮಚ ಓಟ್ಸ್, 1 ಚಮಚ ಟೊಮೆಟೊ ಪ್ಯೂರಿ ಮತ್ತು 1 ಚಮಚ ರೋಸ್ ವಾಟರ್ ಬೆರೆಸಿ ಮುಖಕ್ಕೆ ಮಸಾಜ್ ಮಾಡಿ. 15 ನಿಮಿಷದ ನಂತರ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.
- ಓಟ್ಸ್ ಮತ್ತು ಕಿವಿ ಹಣ್ಣು (ಶುಷ್ಕ ಚರ್ಮಕ್ಕೆ):
- ವಿಧಾನ: 1 ಕಿವಿ ಹಣ್ಣಿನ ಪೇಸ್ಟ್, 2 ಚಮಚ ಓಟ್ಸ್, 1 ಚಮಚ ಮೊಸರು ಮತ್ತು 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಹಚ್ಚಿ. ಇದು ಚರ್ಮಕ್ಕೆ ಹೈಡ್ರೇಶನ್ ನೀಡುತ್ತದೆ.
ಓಟ್ ಮೀಲ್ ಫೇಸ್ ಮಾಸ್ಕ್‌ನ ಪ್ರಯೋಜನಗಳು:
- ನೈಸರ್ಗಿಕ ಸ್ಕ್ರಬ್: ಇದು ಸತ್ತ ಜೀವಕೋಶಗಳನ್ನು (Dead cells) ತೆಗೆದು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ.
- ಎಕ್ಸಿಮಾ ಮತ್ತು ಸೋರಿಯಾಸಿಸ್: ತುರಿಕೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಇದು ಸಹಕಾರಿ ಎಂದು ಸಂಶೋಧನೆಗಳು ತಿಳಿಸಿವೆ.
- ತೇವಾಂಶ: ಇದರಲ್ಲಿರುವ ಸಿಲಿಕಾ ಅಂಶವು ಚರ್ಮದ ತೇವಾಂಶವನ್ನು ಮರಳಿ ತರುತ್ತದೆ.

