ಪಶ್ಚಿಮ ದೆಹಲಿಯ ಮಹಾರಾಜ ಸೂರಜ್ಮಲ್ ಮೆಟ್ರೋ ನಿಲ್ದಾಣದ ಎತ್ತರದ ಪ್ಲಾಟ್‌ಫಾರ್ಮ್‌ನಿಂದ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು 49 ವರ್ಷದ ರೋಹಿಣಿ ಸೆಕ್ಟರ್ -7ರ ನಿವಾಸಿ ಎಂದು ಗುರುತಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತಿದ್ದ.
ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ತಿದ್ದ ವಿಡಿಯೋ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಬ್ಬ ವ್ಯಕ್ತಿಯು ಎತ್ತರದ ಪ್ಲಾಟ್‌ಫಾರ್ಮ್‌ನ ತುದಿಯಲ್ಲಿ ಕುಳಿತಿರುವುದನ್ನು ಕಾಣಬಹುದು. ನಂತರ ಅವನು ಕೆಳಗೆ ಹಾರುತ್ತಾನೆ. ಆತನನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ಕೆಳಗೆ ಹೊದಿಕೆಗಳನ್ನು ಹಿಡಿದುಕೊಂಡಿದ್ದರು. ಆದ್ರೆ ಪ್ರಯೋಜನವಾಗ್ಲಿಲ್ಲ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ವ್ಯಕ್ತಿಯ ಹೆಸರು ಹರೀಶ್ ಎಂದು ಗುರುತಿಸಲಾಗಿದೆ. ಆತನಿಗೆ ಇಬ್ಬರು ಮಕ್ಕಳಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
https://twitter.com/vani_mehrotra/status/1821534869018628198?ref_src=twsrc%5Etfw%7Ctwcamp%5Etweetembed%7Ctwterm%5E1821534869018628198%7Ctwgr%5E10efa19a678f1a40d50284fd6c01cf8cafe5b01a%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fsuicidecaughtoncameraindelhimanjumpstodeathfrommaharajasurajmalmetrostationplatforminnationalcapitaldisturbingvideosurfaces-newsid-n625766056