ಈ ತಾಂತ್ರಿಕ ಯುಗದಲ್ಲಿ ನಡೆದ ಘಟನೆಗಳನ್ನು ಸೆರೆ ಹಿಡಿಯಲು ಹಲವಾರು ಮಾರ್ಗಗಳಿವೆ. ಅದರಲ್ಲಿಯೂ ಸಿಸಿ ಟಿವಿ ಫುಟೇಜ್ನಿಂದ ಹಲವಾರು ವಿಷಯಗಳು ಬಹಿರಂಗಗೊಂಡಿವೆ. ಅಂಥದ್ದೇ ಒಂದು ಕುತೂಹಲದ ಸಂಗತಿ ಇದೀಗ ಸಿಸಿ ಟಿವಿಯಲ್ಲಿ ಬಹಿರಂಗಗೊಂಡಿದೆ.
ಅದೇನೆಂದರೆ ದೊಡ್ಡ ಬಂಡೆ ಗಾತ್ರದ ಉಲ್ಕೆಯೊಂದು ಮನೆಯಂಗಳದಲ್ಲಿ ಬಿದ್ದಿದೆ! ಮನೆಯಲ್ಲಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ. ಅಮೆರಿಕದ ಟೆಕ್ಸಾಸ್ನಲ್ಲಿ ಇದು ನಡೆದಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ.
ದಪ್ಪನಾದ ಬಂಡೆಯ ತುಂಡು ಅವರ ಹಿತ್ತಲಿನಲ್ಲಿ ಬಿದ್ದಾಗ ಸ್ಫೋಟಕ ಶಬ್ದ ಕೇಳಿಬಂದಿದೆ. ಹೊರಗೆ ಬಂದು ನೋಡಿದಾಗ ಈ ತುಂಡನ್ನು ನೋಡಿ ಮನೆ ಮಾಲೀಕರು ಆತಂಕಗೊಂಡು ಮನೆಯೊಳಕ್ಕೆ ಸೇರಿಕೊಂಡಿದ್ದಾರೆ. ನಂತರ ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಇದು ಸುಮಾರು 450 ಕೆ.ಜಿ, ಭಾರವಿತ್ತು.
ಕೊನೆಗೆ ತಜ್ಞರ ತಂಡ ಬಂದು ಪರಿಶೀಲನೆ ಮಾಡಿದಾಗ ಇದು ಉಲ್ಕೆಯ ತುಂಡು ಎಂದು ತಿಳಿದು ಬಂದಿದೆ. ನಂತರ ಸಿಸಿ ಟಿವಿ ಫುಟೇಜ್ ನೋಡಿದಾಗ ಇದು ಯಾರೊಬ್ಬರು ಮಾಡಿದ ಕೃತ್ಯವಲ್ಲ, ಬದಲಿಗೆ ಆಗಸದಿಂದ ಬಂದಿರುವ ತುಂಡು ಎಂದು ತಿಳಿದಿದೆ. ಇದು ಈಗ ಸಾಮಾಜಿಕ ಜಾಲತಾಣಿಗರನ್ನು ಅಚ್ಚರಿಗೆ ತಳ್ಳಿದೆ.
https://twitter.com/disdikmark/status/1626084497740513280?ref_src=twsrc%5Etfw%7Ctwcamp%5Etweetembed%7Ctwterm%5E1626084497740513280%7Ctwgr%5E519f748f817177bf0174eb5ba712c1cad5631ed4%7Ctwcon%5Es1_&ref_url=https%3A%2F%2Fwww.news18.com%2Fbuzz%2F450-kg-meteor-crashes-in-backyard-doorbell-camera-captures-the-moment-7158067.html
https://twitter.com/VidalDPerez/status/1626136210707042307?ref_src=twsrc%5Etfw%7Ctwcamp%5Etweetembed%7Ctwterm%5E1626136210707042307%7Ctwgr%5E519f748f817177bf0174eb5ba712c1cad5631ed4%7Ctwcon%5Es1_&ref_url=https%3A%2F%2Fwww.news18.com%2Fbuzz%2F450-kg-meteor-crashes-in-backyard-doorbell-camera-captures-the-moment-7158067.html
https://twitter.com/disdikmark/status/1626084497740513280?ref_src=twsrc%5Etfw%7Ctwcamp%5Etweetembed%7Ctwterm%5E1626260362222882817%7Ctwgr%5E519f748f817177bf0174eb5ba712c1cad5631ed4%7Ctwcon%5Es2_&ref_url=https%3A%2F%2Fwww.news18.com%2Fbuzz%2F450-kg-meteor-crashes-in-backyard-doorbell-camera-captures-the-moment-7158067.html