HomeInternationalಕೆನಡಾದಲ್ಲಿ ಘೋರ ದುರಂತ: ಪಿಲ್ಲರ್ ಗೆ ಡಿಕ್ಕಿ ಹೊಡೆದು ಎಲೆಕ್ಟ್ರಿಕ್ ಕಾರ್ ಗೆ ಬೆಂಕಿ: ನಾಲ್ವರು...

ಕೆನಡಾದಲ್ಲಿ ಘೋರ ದುರಂತ: ಪಿಲ್ಲರ್ ಗೆ ಡಿಕ್ಕಿ ಹೊಡೆದು ಎಲೆಕ್ಟ್ರಿಕ್ ಕಾರ್ ಗೆ ಬೆಂಕಿ: ನಾಲ್ವರು ಭಾರತೀಯರು ಸಾವು

ವಡೋದರಾ: ಕೆನಡಾದಲ್ಲಿ ಡಿವೈಡರ್ ಪಿಲ್ಲರ್‌ಗೆ ಡಿಕ್ಕಿ ಹೊಡೆದು ಎಲೆಕ್ಟ್ರಿಕ್ ಕಾರ್ ಬೆಂಕಿಗೆ ಆಹುತಿಯಾಗಿದ್ದು, ಅಪಘಾತದಲ್ಲಿ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ. ನಾಲ್ವರಲ್ಲಿ ಕೆನಡಾದಲ್ಲಿ ನೆಲೆಸಿರುವ ಗುಜರಾತ್‌ನ ಮೂವರು ಯುವಕರು ಸೇರಿದ್ದಾರೆ.

ಗುರುವಾರ ರಾತ್ರಿ(ಭಾರತೀಯ ಕಾಲಮಾನ) ಬ್ರಾಂಪ್ಟನ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಗುಂಪು ರಾತ್ರಿ ಊಟ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ಪ್ರಯಾಣಿಸುತ್ತಿದ್ದ ಟೆಸ್ಲಾ ಎಲೆಕ್ಟ್ರಿಕ್ ಕಾರು ಪಿಲ್ಲರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ.

ಟೆಸ್ಲಾ ಕಾರು ಚಾಲಕನು ಹೆಚ್ಚಿನ ವೇಗದಲ್ಲಿ ಚಲಿಸುವಾಗ ವಾಹನದ ನಿಯಂತ್ರಣವನ್ನು ಕಳೆದುಕೊಂಡು ಗಾರ್ಡ್ ರೈಲಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಬೆಂಕಿ ಹೊತ್ತಿಕೊಂಡು ಸಿಡಿಯುವ ಮೊದಲು ಕಾಂಕ್ರೀಟ್ ಪಿಲ್ಲರ್‌ಗೆ ಕಾರ್ ಡಿಕ್ಕಿ ಹೊಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತರಲ್ಲಿ ಗೋಧ್ರಾ ನಿವಾಸಿಗಳಾದ ಕೇತಾಬಾ ಗೋಹಿಲ್(29) ಮತ್ತು ಆಕೆಯ ಸಹೋದರ ನೀಲರಾಜ್ ಗೋಹಿಲ್(25), ಆನಂದ್ ಜಿಲ್ಲೆಯ ಬೋರ್ಸಾದ್‌ಗೆ ಸೇರಿದ ಜಯರಾಜ್‌ಸಿಂಗ್ ಸಿಸೋಡಿಯಾ ಸೇರಿದ್ದಾರೆ. ಕಾರ್ ನಲ್ಲಿದ್ದ ಇನ್ನಿಬ್ಬರಲ್ಲಿ ಝಲಕ್ ಪಟೇಲ್ ಪಾರಾಟಗಿದ್ದು, ಓರ್ವ ಪುರುಷ ಸಹ ಸಾವನ್ನಪ್ಪಿದ್ದಾರೆ. ಕಾರ್ ಗೆ ಬೆಂಕಿ ಹೊತ್ತಿಕೊಂಡಿದೆ. ಸ್ಫೋಟ ಸಂಭವಿಸಿದೆ. ಇದರಿಂದ ಅವರೆಲ್ಲರೂ ಒಳಗೆ ಸಿಲುಕಿಕೊಂಡಿದ್ದರು ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular