ಸೇಂಟ್ ಪೀಟರ್ಸ್ ಬರ್ಗ್ ಬಳಿ ದುರಂತ: ನದಿಯಲ್ಲಿ ಮುಳುಗಿ ನಾಲ್ವರು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ದುರ್ಮರಣ

ಮಾಸ್ಕೋ: ಭಾರತೀಯ ಮೂಲದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಬಳಿ ನಡೆದಿದೆ.

ರಷ್ಯಾದ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ಮಾಹಿತಿ ನೀಡಿದೆ. ಘಟನೆಯಲ್ಲಿ ಓರ್ವನನ್ನು ರಕ್ಷಿಸಲಾಗಿದೆ. ಮೃತದೇಹಗಳನ್ನು ಶೀಘ್ರವಾಗಿ ಭಾರತಕ್ಕೆರವಾನಿಸುವುದಾಗಿ ತಿಳಿಸಿದೆ.

ಮೃತರಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಇಬ್ಬರು ವಿದ್ಯಾರ್ಥಿನಿಯರಾಗಿದ್ದು, ಸುಮಾರಿ 18-20 ವರ್ಷದವರು ಎಂದು ತಿಳಿದುಬಂದಿದೆ. ಇವರು ವೆಲಿಕಿ ನೊವ್ಗೊರೊಡ್ ನಗರದ ಸಮೀಪದಲ್ಲಿರುವ ನೊವ್ಗೊರೊಡ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿದ್ದರು.

ಓರ್ವ ವಿದ್ಯಾರ್ಥಿನಿ ವೋಲ್ಖೋವ್ ನದಿಗೆ ಬಿದ್ದಿದ್ದು, ಈ ವೇಳೆ ಆಕೆಯನ್ನು ರಕ್ಷಿಸಲೆಂದು ನಾಲ್ವರು ಸ್ನೇಹಿತರು ನದಿಗೆ ಧುಮುಕಿದ್ದಾರೆ. ಈ ವೇಳೆ ದುರಂತ ಸಂಭವಿಸಿದೆ. ಓರ್ವನನ್ನು ರಕ್ಷಿಸಲಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read