ರಾಜ್ಯದ 3000 ತಾಂಡಾಗಳಿಗೆ ಗ್ರಾಮದ ಮಾನ್ಯತೆ : ಸಿಎಂ ಸಿದ್ದರಾಮಯ್ಯ ಭರವಸೆ

ಬೆಂಗಳೂರು : ರಾಜ್ಯದಲ್ಲಿ ಬಾಕಿ ಇರುವ ಮೂರು ಸಾವಿರ ತಾಂಡಾಗಳನ್ನು ಕಂದಾಯ ಗ್ರಾಮವಾಗಿಸಲು ಕಂದಾಯ ಇಲಖಾಎಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ, ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಮೊದಲು ಆದೇಶಿಸಿದ್ದೇ ನಮ್ಮ ಸರ್ಕಾರ. ಬಾಕಿ ಉಳಿದಿರುವ ತಾಂಡಾಗಳನ್ನೂ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಎನ್ನುವ ಸ್ಪಷ್ಟ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಇದ್ದಾಗಲೇ ಸರ್ಕಾರವೇ ಸೇವಾಲಾಲ್ ಜಯಂತಿ ಆಚರಿಸಲು ಆದೇಶಿಸಿದ್ದೆವು. ಸೇವಾಲಾಲ್ ಅವರು ಒಂದು ಜಾತಿ, ಸಮುದಾಯಕ್ಕೆ ಸೇರಿದವರಲ್ಲ. ಅವರು ಮನುಷ್ಯ ಸಮಾಜದ ಬೆಳಕು.  ಬಂಜಾರ ಸಮುದಾಯ ವಿದ್ಯಾವಂತರಾಗಿ, ಸ್ವಾಭಿಮಾನಿಗಳಾಗಿ ಬದುಕಲು ಪ್ರೇರಣೆ ಆದ ದಾರ್ಶನಿಕ ಸೇವಾಲಾಲ್ ಅವರನ್ನು ಸರ್ಕಾರವೇ ಮುಂದೆ ನಿಂತು ಗೌರವಿಸಬೇಕು ಎನ್ನುವ ಉದ್ದೇಶದಿಂದಲೇ ನಮ್ಮ ಸರ್ಕಾರ ಸೇವಲಾಲ್ ದಿನಾಚರಣೆಯನ್ನು ಆರಂಭಿಸಿತು ಎಂದರು.

ಸೇವಾಲಾಲ್‌ರ ಜನ್ಮಸ್ಥಳ ಅಭಿವೃದ್ಧಿಗೆ ಪ್ರಸ್ತುತ ಸರ್ಕಾರದಲ್ಲೂ ಅಗತ್ಯ ಅನುದಾನ ಒದಗಿಸಲಾಗುವುದು. ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೂ ಅಗತ್ಯ ಅನುದಾನ ನೀಡಿದ್ದೆ. ವಾಸಿಸಿರುವವನೇ ಮನೆಯ ಒಡೆಯ ಎನ್ನುವ ಕಾನೂನು ತಂದಿದ್ದು ನಮ್ಮ ಸರ್ಕಾರ. ಇದರಿಂದ ತಾಂಡಾಗಳಲ್ಲಿ ನೆಲೆಸಿದ್ದ ಬಂಜಾರ ಸಮುದಾಯಕ್ಕೆ ಭೂಒಡೆತನದ ಹಕ್ಕು ದೊರೆತು ಸಾಕಷ್ಟು ಅನುಕೂಲವಾಯಿತು ಎಂದು ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read