HomeBeautyಮಾವಿನ ಹಣ್ಣಿನಿಂದ ಮಾಡಿ ಕೂದಲಿನ ಆರೈಕೆ

ಮಾವಿನ ಹಣ್ಣಿನಿಂದ ಮಾಡಿ ಕೂದಲಿನ ಆರೈಕೆ

ಮಾವಿನ ಹಣ್ಣು ಎಲ್ಲರೂ ಇಷ್ಟಪಡುವಂತಹ ಸಿಹಿಯಾದ, ರುಚಿಯಾದ ಹಣ್ಣು. ಇದು ಆರೋಗ್ಯಕ್ಕೆ ಮಾತ್ರವಲ್ಲ ಕೂದಲ ಸೌಂದರ್ಯ ವೃದ್ಧಿಸಲು ಕೂಡ ತುಂಬಾ ಉಪಯೋಗಕಾರಿ. ಹೇಗೆ ಅಂದರೆ.

* ಮಾವಿನ ಹಣ್ಣಿನ ತಿರುಳು ಹಾಗೂ 2 ಟೀ ಚಮಚ ಆಲಿವ್ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ½ ಗಂಟೆ ಬಿಟ್ಟು ತೊಳೆದರೆ ಕೂದಲು ರೇಷ್ಮೆಯಂತೆ ನಯವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* 1 ಹಣ್ಣಾದ ಮಾವಿನ ಹಣ್ಣಿನ ತಿರುಳಿಗೆ 2 ಮೊಟ್ಟೆಯ ಹಳದಿ ಭಾಗ ಹಾಗೂ 2 ಚಮಚ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 45 ನಿಮಿಷಗಳ ನಂತರ ಶಾಂಪೂವಿನಿಂದ ತೊಳೆಯಿರಿ. ಇದರಿಂದ ಕೂದಲು ನಯವಾಗಿ ಬಲವಾಗುತ್ತದೆ. ಅಲ್ಲದೇ ಇದು ಕೂದಲ ಬೆಳವಣೆಗೆಗೂ ಸಹಕಾರಿ.

* ಮಾವಿನ ಹಣ್ಣಿನ ತಿರುಳಿಗೆ 1 ಚಮಚ ಅಲೊವೆರಾ ಜೆಲ್ ಹಾಗೂ 1 ಚಮಚ ಹರಳೆಣ್ಣೆ ಮಿಕ್ಸ್ ಮಾಡಿ. ಇದು ಕೂದಲು ಹಾನಿಗೊಳಗಾಗುವುದನ್ನು ಮತ್ತು ಕೂದಲು ಕವಲೊಡೆಯುವುದನ್ನು ತಡೆಗಟ್ಟುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular