HomeLatest NewsALERT : ರಸ್ತೆ ಬದಿ ಕಟ್ಟಡ ತ್ಯಾಜ್ಯ ಹಾಕಿದರೆ ₹3,000 ದಂಡ; ಪ್ಲಾಸ್ಟಿಕ್ ಬಳಕೆಗೂ ದಂಡದ...

ALERT : ರಸ್ತೆ ಬದಿ ಕಟ್ಟಡ ತ್ಯಾಜ್ಯ ಹಾಕಿದರೆ ₹3,000 ದಂಡ; ಪ್ಲಾಸ್ಟಿಕ್ ಬಳಕೆಗೂ ದಂಡದ ಬಿಸಿ!

ಬಳ್ಳಾರಿ : ಕುಡತಿನಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮತ್ತು ತೆರವು ತ್ಯಾಜ್ಯಗಳನ್ನು ಅನಧಿಕೃತವಾಗಿ ಎಸೆಯುವವರ ವಿರುದ್ಧ ಹಾಗೂ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಸುವವರ ವಿರುದ್ಧ ಕಠಿಣ ದಂಡ ಮತ್ತು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಕಟ್ಟಡ ನಿರ್ಮಾಣ, ನೆಲಸಮ ಹಾಗೂ ದುರಸ್ತಿ ಕಾಮಗಾರಿಗಳಿಂದ ಉಂಟಾಗುವ ತ್ಯಾಜ್ಯವನ್ನು ರಸ್ತೆ ಬದಿ, ಚರಂಡಿ, ಖಾಲಿ ನಿವೇಶನ ಹಾಗೂ ಸರ್ಕಾರಿ ಜಾಗಗಳಲ್ಲಿ ಅನಧಿಕೃತವಾಗಿ ವಿಲೇವಾರಿ ಮಾಡುತ್ತಿರುವುದು ಕಂಡುಬಂದಿದೆ. ಇದು ‘ಕನ್ ಸ್ಟçಕ್ಷನ್ ಆಂಡ್ ಡಿಮಾಲಿಷನ್ ವೇಸ್ಟ್ ಮ್ಯಾನೇಜ್‌ಮೆಂಟ್ ರೂಲ್ಸ್, 2016′ ಮತ್ತು ‘ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ರೂಲ್ಸ್, 2026’ರ ನಿಯಮಗಳಿಗೆ ವಿರುದ್ಧವಾಗಿದ್ದು, ಸಾರ್ವಜನಿಕ ಆರೋಗ್ಯ ಸಮಸ್ಯೆ ಹಾಗೂ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದೆ.

ನಿಯಮಗಳ ಪ್ರಕಾರ ‘ಮಾಲಿನ್ಯಕಾರಕರೇ ದಂಡ ತೆರಬೇಕು, ಆಧಾರದ ಮೇಲೆ ಸ್ಥಳೀಯ ಸಂಸ್ಥೆಗಳಿಗೆ ಪರಿಸರ ಪರಿಹಾರ/ದಂಡ ವಿಧಿಸಲು ಅಧಿಕಾರ ನೀಡಲಾಗಿದೆ. ಹಾಗಾಗಿ ಕಟ್ಟಡ ಮಾಲೀಕರು ಮತ್ತು ಗುತ್ತಿಗೆದಾರರು ತ್ಯಾಜ್ಯವನ್ನು ಪುರಸಭೆ ಸೂಚಿಸಿದ ಸ್ಥಳಗಳಿಗೆ ಮಾತ್ರ ಸಾಗಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ನಿಯಮಿತ ಬಳಕೆದಾರರ ಶುಲ್ಕ:*

ವಸತಿ ಮನೆಗಳು (0-300 ಚ.ಮೀ.): ರೂ.8/ಚ.ಮೀ.

ವಸತಿ ಮನೆಗಳು (300 ಚ.ಮೀ. ಮೇಲ್ಪಟ್ಟು): ರೂ.12/ಚ.ಮೀ.

ವಾಣಿಜ್ಯ ಕಟ್ಟಡಗಳು (0-300 ಚ.ಮೀ.ವರೆಗೆ): ರೂ.10/ಚ.ಮೀ.

ವಾಣಿಜ್ಯ ಕಟ್ಟಡಗಳು (300 ಚ.ಮೀ. ಮೇಲ್ಪಟ್ಟು): ರೂ.16/ಚ.ಮೀ.

*ಉಲ್ಲಂಘನೆಗೆ ವಿಧಿಸಲಾಗುವ ದಂಡ:*

ರಸ್ತೆ, ಚರಂಡಿ, ಖಾಲಿ ನಿವೇಶನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ಹಾಕಿದರೆ ರೂ.3,000 ದಂಡ ವಿಧಿಸಲಾಗುತ್ತದೆ. ಪುರಸಭೆ ಸೂಚನೆಯ ನಂತರವೂ ತ್ಯಾಜ್ಯ ತೆರವುಗೊಳಿಸದಿದ್ದರೆ ರೂ.2,000 (ಪ್ರತಿ ಟ್ರಿಪ್‌ಗೆ) ದಂಡದ ಜೊತೆಗೆ ತೆರವು ವೆಚ್ಚವನ್ನು ಪ್ರತ್ಯೇಕವಾಗಿ ವಸೂಲಿ ಮಾಡಲಾಗುತ್ತದೆ.

ತ್ಯಾಜ್ಯ ಸಂಗ್ರಹಿಸುವ ಸೇವಾ ಸಂಸ್ಥೆ ಸಂಪರ್ಕ ಸಂಖ್ಯೆ: ಪಟ್ಟಣ ಪಂಚಾಯಿತಿ ಕಾರ್ಯಾಲಯ, ಕುಡತಿನಿ– ದೂ.08392-248025)

*ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಜಾರಿಗೊಳಿಸಿದ ದಂಡದ ವಿವರ:*

*ಪ್ಲಾಸ್ಟಿಕ್ ಪ್ರಮಾಣ ಆಧರಿಸಿ ವಿಧಿಸುವ ದಂಡ:*

01 ಕೆ.ಜಿ. ಗಿಂತ ಕಡಿಮೆ: ಮೊದಲ ಬಾರಿಗೆ ರೂ.100, ಎರಡನೇ ಬಾರಿಗೆ ರೂ.200

01 ರಿಂದ 10 ಕೆ.ಜಿ.ವರೆಗೆ: ಮೊದಲ ಬಾರಿಗೆ ರೂ.200, ಎರಡನೇ ಬಾರಿಗೆ ರೂ.500.

10 ರಿಂದ 50 ಕೆ.ಜಿ.ವರೆಗೆ: ಮೊದಲ ಬಾರಿಗೆ ರೂ.500, ಎರಡನೇ ಬಾರಿಗೆ ರೂ.1,000.

50 ರಿಂದ 100 ಕೆ.ಜಿ.ವರೆಗೆ: ಮೊದಲ ಬಾರಿಗೆ ರೂ.1,000, ಎರಡನೇ ಬಾರಿಗೆ ರೂ.2,000.

100 ಕೆ.ಜಿ.ಗಿಂತ ಹೆಚ್ಚಿದ್ದರೆ: ಮೊದಲ ಬಾರಿಗೆ ರೂ.1,000, ಎರಡನೇ ಬಾರಿಗೆ ರೂ.2,000.

ಪುನರಾವರ್ತಿತ ಉಲ್ಲಂಘನೆ ಕಂಡುಬಂದಲ್ಲಿ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಮತ್ತು/ಅಥವಾ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

*ಮಾರಾಟ ಮತ್ತು ಬಳಕೆಯ ಸ್ಥಳಗಳಲ್ಲಿ ವಿಧಿಸುವ ದಂಡ:*

ಪ್ಲಾಸ್ಟಿಕ್ ಉತ್ಪಾದಕರಿಗೆ: ಮೊದಲ ಬಾರಿಗೆ ರೂ.10,000/-, ಪುನರಾವರ್ತನೆಯಾದರೆ ರೂ.15,000.

ಉಗ್ರಾಣದಲ್ಲಿ (ಗೋದಾಮು) ಸಂಗ್ರಹಿಸಿದ್ದರೆ: ಮೊದಲ ಬಾರಿಗೆ ರೂ.2,000, ಪುನರಾವರ್ತನೆಯಾದರೆ ರೂ.3,000.

ಪ್ಲಾಸ್ಟಿಕ್ ಮಾರಾಟ ಮಾಡಿದರೆ: ಮೊದಲ ಬಾರಿಗೆ ರೂ.200, ಪುನರಾವರ್ತನೆಯಾದರೆ ರೂ.500.

ವಾಣಿಜ್ಯ ಬಳಕೆಯಲ್ಲಿ: ಮೊದಲ ಬಾರಿಗೆ ರೂ.500, ಪುನರಾವರ್ತನೆಯಾದರೆ ರೂ.1,000.

ತಳ್ಳುವ ಗಾಡಿಯಲ್ಲಿ ಬಳಸಿದರೆ: ಮೊದಲ ಬಾರಿಗೆ ರೂ.100, ಪುನರಾವರ್ತನೆಯಾದರೆ ರೂ.200.

ಗೃಹ ಬಳಕೆ ಮಾಡಿದರೆ: ಮೊದಲ ಬಾರಿಗೆ ರೂ.100, ಪುನರಾವರ್ತನೆಯಾದರೆ ರೂ.200.

ಸಾರ್ವಜನಿಕರು ಕೈಯಲ್ಲಿ ಹಿಡಿದು ಬಳಸಿದರೆ: ಮೊದಲ ಬಾರಿಗೆ ರೂ.500, ಪುನರಾವರ್ತನೆಯಾದರೆ ರೂ.1,000.

ಸಾರ್ವಜನಿಕರು, ಕಟ್ಟಡ ಮಾಲೀಕರು ಹಾಗೂ ವರ್ತಕರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪಟ್ಟಣದ ನೈರ್ಮಲ್ಯಕ್ಕೆ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular