ಜೈಪುರ: ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಭಾನುವಾರ ಮೋಟಾರ್ ಸೈಕಲ್ ತುಂಡಾದ ಹೈಟೆನ್ಷನ್ ತಂತಿಗೆ ಸಿಲುಕಿ ಮೂವರು ಪುರುಷರು ಜೀವಂತ ದಹನಗೊಂಡಿದ್ದಾರೆ.
ಖಿನ್ವ್ಸರ್‌ನ ಮುಂಡಿಯಾಡ್-ಕಾಡ್ಲು ರಸ್ತೆಯಲ್ಲಿ ಪಿತಾರಾಮ್ ದೇವಸಿ, ಕಲುರಾಮ್ ದೇವಸಿ ಮತ್ತು ಜೇತಾರಾಮ್ ದೇವಸಿ ಕಡ್ಲು ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆಯ ಮೇಲೆ ತಂತಿ ಬಿದ್ದಿದ್ದು, ಮೋಟಾರ್ ಸೈಕಲ್ ಅದರ ಮೇಲೆ ಹಾದು ಹೋದ ತಕ್ಷಣ ವಿದ್ಯುತ್ ಪ್ರವಹಿಸಿ ಬೆಂಕಿ ಹೊತ್ತಿಕೊಂಡಿತು. ಮೂವರು ಜೀವಂತವಾಗಿ ಸುಟ್ಟುಹೋದರು ಮತ್ತು ಬೈಕ್ ಸಂಪೂರ್ಣವಾಗಿ ನಾಶವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳೀಯರು ವಿದ್ಯುತ್ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು, ನಂತರ ವಿದ್ಯುತ್ ಸರಬರಾಜು ಕಡಿತಗೊಂಡಿತು. ವಿದ್ಯುತ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಆರೋಪದ ಮೇಲೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗೌರ್ ಸಂಸದ ಹನುಮಾನ್ ಬೇನಿವಾಲ್ ಬಲಿಯಾದವರ ಕುಟುಂಬಗಳಿಗೆ ತಲಾ 15 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ವಿದ್ಯುತ್ ಮಾರ್ಗಗಳ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದ್ದರೂ, ಹೈ-ಟೆನ್ಷನ್ ತಂತಿಗಳು ಇನ್ನೂ ನೆಲದ ಮೇಲೆ ಬಿದ್ದಿವೆ, ಇದರಿಂದಾಗಿ ಇಂದು ಮೂವರು ಸಾವನ್ನಪ್ಪಿದ್ದಾರೆ. ರಾಜಸ್ಥಾನ ಸರ್ಕಾರವು ಮೃತರ ಅವಲಂಬಿತರಿಗೆ ತಲಾ 15 ಲಕ್ಷ ರೂಪಾಯಿಗಳನ್ನು ಆರ್ಥಿಕ ಸಹಾಯವಾಗಿ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.