HomeKarnatakaBIG NEWS: 3 ಡಿಸಿಎಂ ಹುದ್ದೆ ಸೃಷ್ಟಿ; ಡಿ.ಕೆ.ಶಿವಕುಮಾರ್ ಸೊಕ್ಕು ಮುರಿಯಲು ಅವರ ಪಕ್ಷದವರೇ ಮಾಡಿರುವ...

BIG NEWS: 3 ಡಿಸಿಎಂ ಹುದ್ದೆ ಸೃಷ್ಟಿ; ಡಿ.ಕೆ.ಶಿವಕುಮಾರ್ ಸೊಕ್ಕು ಮುರಿಯಲು ಅವರ ಪಕ್ಷದವರೇ ಮಾಡಿರುವ ಪ್ಲಾನ್ ಇದು; ಬಿ.ವೈ.ವಿಜಯೇಂದ್ರ ಟಾಂಗ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡಲು ನಾವು ಹೇಳಿಕೊಟ್ಟಿಲ್ಲ. ಕಾಂಗ್ರೆಸ್ ನಾಯಕರೇ ಮಾಡಿಕೊಂಡಿರುವ ಪ್ಲಾನ್ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಲೋಕಸಭೆ ಚುನಾವಣೆಯಲ್ಲಿ 20 ಕ್ಷೇತ್ರ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನವರು ಇದ್ದರು. ಆದರೆ ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ನವರೇ ದಿಕ್ಕಾಪಾಲಾಗಿ ಹೋಗುತ್ತಿದ್ದಾರೆ. ಹಾಗಾಗಿ ಅವರ ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸೊಕ್ಕು ಮುರಿಯಲು ಕಾಂಗ್ರೆಸ್ ನ ಮಹಾನಾಯಕರೆಲ್ಲ ಸೇರಿಕೊಂಡು ಮೂರು ಡಿಸಿಎಂ ಹುದ್ದೆ ಸೃಷ್ಟಿಗೆ ಮಾಡಿಕೊಂಡಿರುವ ಪ್ಲಾನ್ ಇದು. ಕಾಂಗ್ರೆಸ್ ನಾಯಕರ ಈ ಪ್ರಯತ್ನ ಯಶಸ್ವಿಯಾಗಲಿ ಎಂದು ನಾವೂ ಬಯಸುತ್ತೇವೆ ಎಂದು ಟಾಂಗ್ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular