BIG NEWS: 3 ಬ್ಯಾಂಕ್ ಮ್ಯಾನೇಜರ್ ಗಳು ಅರೆಸ್ಟ್

ಬೆಂಗಳೂರು: ನಕಲಿ ಭೂ ದಾಖಲೆಗಳನ್ನು ಹೊಂದಿದ್ದವರಿಗೆ ಸಾಲ ನೀಡಿದ್ದ ಮೂವರು ಬ್ಯಾಂಕ್ ಮ್ಯಾನೇಜರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಐಸಿಐಸಿಐ ಬ್ಯಾಂಕ್ ನ ಸೇಲ್ಸ್ ಮ್ಯಾನೇಜರ್ ರಾಕೇಶ್, ಸೆಂಟ್ ಮಾರ್ಕ್ಸ್ ರಸ್ತೆಯ ಎಸ್ ಬಿಐ ಬ್ಯಾಂಕ್ ಎಜಿಎಂ ಮುರಳೀಧರ್, ಬೆಂಗಳೂರು ಜಿಲ್ಲಾ ಕೋ ಆಪರೇಟಿವ್ ಬ್ಯಾಂಕ್ ನ ಮಲ್ಲಿಕಾರ್ಜುನ ಬಂಧಿತ ಆರೋಪಿಗಳು.

ದಾಖಲೆಗಳನ್ನು ಪರಿಶೀಲಿಸದೇ ನಕಲಿ ಭೂ ದಾಖಲೆ ಹೊಂದಿದ್ದವರಿಗೆ ಸಾಲ ನೀಡಿದ ಹಿನ್ನೆಲೆಯಲ್ಲಿ ಸುಮಾರು ನಾಲ್ಕುವರೆ ಕೋಟಿ ರೂಪಾಯಿ ಸಾಲ ಮರುಪಾವತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮೂವರು ಬ್ಯಾಂಕ್ ಮ್ಯಾನೇಜರ್ ಗಳನ್ನು ಬಂಧಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read