HomeIndiaಉತ್ತರಾಖಂಡದ ಪಿಥೋರ್ ಗಢದಲ್ಲಿ 3.8 ತೀವ್ರತೆಯ ಭೂಕಂಪ: ಆಫ್ಘಾನಿಸ್ಥಾನದಲ್ಲೂ ಕಂಪಿಸಿದ ಭೂಮಿ

ಉತ್ತರಾಖಂಡದ ಪಿಥೋರ್ ಗಢದಲ್ಲಿ 3.8 ತೀವ್ರತೆಯ ಭೂಕಂಪ: ಆಫ್ಘಾನಿಸ್ಥಾನದಲ್ಲೂ ಕಂಪಿಸಿದ ಭೂಮಿ

ಉತ್ತರಾಖಂಡದ ಪಿಥೋರ್ ಗಢದಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭಾನುವಾರ ಬೆಳಿಗ್ಗೆ 8.58 ಕ್ಕೆ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪವು ಉತ್ತರಾಖಂಡದ ಉತ್ತರ ಗುಡ್ಡಗಾಡು ರಾಜ್ಯವನ್ನು ಕಂಪಿಸುವಂತೆ ಮಾಡಿದೆ.

ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರದ(ಎನ್‌ಸಿಎಸ್) ಪ್ರಕಾರ, ಭೂಕಂಪದ ಕೇಂದ್ರವು ಪಿಥೋರಗಢ್ ಬಳಿ ಇತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಶದಲ್ಲಿ ಭೂಕಂಪದ ಚಟುವಟಿಕೆಯ ಮೇಲ್ವಿಚಾರಣೆಗಾಗಿ ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾದ NCS, 3.8 ತೀವ್ರತೆಯ ಭೂಕಂಪ ಉತ್ತರಾಖಂಡ್‌ನ ಪಿಥೋರಗಢ್‌ನ 23 ಕಿಮೀ ದೂರದಲ್ಲಿ ಭೂಮಿಯ 10 ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.

ಆಫ್ಘಾನಿಸ್ತಾನದ ಫೈಜಾಬಾದ್ ನಲ್ಲಿ ಭೂಮಿ ಕಂಪಿಸಿದೆ, ರಿಕ್ಟರ್ ಮಾಪಕದಲ್ಲಿ 4.2 ರಷ್ಟು ಕಂಪನದ ತೀವ್ರತೆ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular