HomeEntertainment3 ಮಿಲಿಯನ್ ವೀಕ್ಷಣೆ ಪಡೆದ 'ವೀರಂʼ ಚಿತ್ರದ ಲಿರಿಕಲ್ ಸಾಂಗ್

3 ಮಿಲಿಯನ್ ವೀಕ್ಷಣೆ ಪಡೆದ ‘ವೀರಂʼ ಚಿತ್ರದ ಲಿರಿಕಲ್ ಸಾಂಗ್

ಪ್ರಜ್ವಲ್ ದೇವರಾಜ್ ನಟನೆಯ ಆಕ್ಷನ್, ಲವ್ ಸ್ಟೋರಿ ಕಥಾಂದರ ಹೊಂದಿರುವ ವೀರಂ ಚಿತ್ರದ ಲಿರಿಕಲ್ ಸಾಂಗ್ ಒಂದನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು ‘ಶಿವಶಿವ’ ಎಂಬ ಈ ಹಾಡು 3 ಮಿಲಿಯನ್ ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಖ್ಯಾತ ಗಾಯಕಿ ಅನನ್ಯ ಭಟ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಅನೂಪ್ ಸಂಗೀತವಿದೆ.

ಶಶಿಧರ್ ಕೆ ಎಂ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸಿದ್ದು, ಹಿರಿಯ ನಟಿ ಶೃತಿ ಸೇರಿದಂತೆ ಶ್ರೀನಗರ ಕಿಟ್ಟಿ, ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular