25ರ ಹರೆಯದವಳಂತೆ ಕಾಣ್ತಾಳೆ ಈ ಚೆಲುವೆ….! ಇವಳ ವಯಸ್ಸು ತಿಳಿದ್ರೆ ಬೆರಗಾಗ್ತೀರಾ

50ರ ಹರೆಯದಲ್ಲೂ ಸಖತ್‌ ಫಿಟ್‌ ಹಾಗೂ ಬ್ಯೂಟಿಫುಲ್‌ ಆಗಿರೋ ನಟಿಯರನ್ನು ನೋಡಿ ನಾವೆಲ್ಲಾ ಅಚ್ಚರಿಪಡುತ್ತಿದ್ವಿ. ಆದ್ರೆ ಅಮೇರಿಕದ ಫ್ಯಾಷನ್ ಡಿಸೈನರ್ ವೆರಾ ವಾಂಗ್ ಅವರನ್ನು ನೋಡಿದ್ರೆ ನೀವು ಅಕ್ಷರಶಃ ಶಾಕ್‌ ಆಗೋದು ಗ್ಯಾರಂಟಿ. ಈಕೆಗೆ 25 ವರ್ಷವಿರಬಹುದು ಅನ್ನೋದು ಎಲ್ಲರ ಅಂದಾಜು.

ಅಸಲಿಗೆ ವೆರಾ ವಾಂಗ್‌ ವಯಸ್ಸೆಷ್ಟು ಗೊತ್ತಾ? 73 ವರ್ಷ. ವೆರಾ ವಾಂಗ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಇದಕ್ಕೆ ಕಾರಣ ಅವರ ಯಂಗ್ ಲುಕ್.

ವೆರಾ 73ರ ಹರೆಯದಲ್ಲೂ 25ರವಳಂತೆ ಕಾಣಿಸ್ತಾಳೆ. ವಯಸ್ಸು ಈಕೆಗೆ ಕೇವಲ ನಂಬರ್‌ ಮಾತ್ರ. ಯಾಕಂದ್ರೆ ಚರ್ಮ ಕೂಡ ಸ್ವಲ್ಪವೂ ಸುಕ್ಕಾಗಿಲ್ಲ. ಮುಖವಂತೂ ಸಖತ್‌ ಗ್ಲೋಯಿಂಗ್‌ ಆಗಿದೆ.

ಇತ್ತೀಚೆಗೆ ವೆರಾ BAFTA 2023ರ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡಿದ್ದಾಳೆ. ಕಪ್ಪು ಬ್ರಾಲೆಟ್‌ ಜೊತೆಗೆ ಬಿಳಿ ಉಡುಪಿನಲ್ಲಿ ಮಿಂಚಿದ್ದಾಳೆ. 73ನೇ ವಯಸ್ಸಿನಲ್ಲೂ ಬಳುಕುವ ಮೈಮಾಟ ಹೊಂದಿದ್ದಾಳೆ ವೆರಾ. ಈಕೆಯ ಫಿಟ್ನೆಸ್‌ ನೋಡಿ ನೆಟ್ಟಿಗರು ದಂಗಾಗಿದ್ದಾರೆ.

ವೆರಾ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ. ಅದಕ್ಕೆ ಸಾಕಷ್ಟು ಕಮೆಂಟ್‌ಗಳು ಬಂದಿವೆ. ವೆರಾ ಇಷ್ಟು ಯಂಗ್‌ ಆಗಿರೋದಕ್ಕೆ ಕಾರಣ ಫಿಟ್ನೆಸ್‌ ಬಗ್ಗೆ ತೆಗೆದುಕೊಳ್ಳುವ ಕಾಳಜಿ. ವರ್ಕೌಟ್‌ ಹಾಗೂ ಆರೋಗ್ಯಕರ ಆಹಾರದ ಮೂಲಕವೇ ಸಖತ್‌ ಫಿಗರ್‌ ಮೇಂಟೇನ್‌ ಮಾಡಿದ್ದಾಳೆ ಈ ಚೆಲುವೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read