ಹಾಸನ : ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಇದುವರೆಗೆ 24 ಮಂದಿ ಬಲಿಯಾಗಿದ್ದಾರೆ .
ಹೊಳೆನರಸೀಪುರದ ಸೋಮನಹಳ್ಳಿಯ 27 ವರ್ಷದ ಸಂಜಯ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿ ಬಂದಿದ್ದ ಯುವಕ ನಂತರ ಎದೆನೋವು ಎಂದು ಆಸ್ಪತ್ತೆಗೆ ಹೋಗಿದ್ದಾನೆ. ಆತನಿಗೆ ಸೋಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲು ಸೂಚಿಸಿದ್ದಾರೆ. ಆದರೆ ಬೇರೆ ಕಡೆ ಕರೆದೊಯ್ಯುವ ವೇಳೆ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಗಮನಿಸಿ : ಒತ್ತಡದ ಬದುಕಿನ ನಡುವೆಯೂ ಆರೋಗ್ಯಕರ ಜೀವನಶೈಲಿ ನಿಮ್ಮದಾಗಿಸಿಕೊಳ್ಳುವ ಮೂಲಕ ನಿಮ್ಮ ಹೃದಯದ ಕಾಳಜಿ ವಹಿಸಿ . ಎದೆನೋವು ಬಂದಾಗ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬೇಡಿಎದೆನೋವು ಅಥವಾ ಹೃದಯಾಘಾತಕ್ಕೆ ಸಂಬಂಧಿಸಿ ಯಾವುದೇ ಲಕ್ಷಣಗಳು ಕ೦ಡುಬ೦ದಲ್ಲಿ ತಕ್ಷಣವೇ ನಿಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ತಿಳಿಸಿ.
You Might Also Like
TAGGED:ಹಾಸನ