HomeLatest NewsALERT : 'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ 24 ಕೋಟಿ ರೂ. ದೋಖಾ : ದೇಶವನ್ನೇ ಬೆಚ್ಚಿಬೀಳಿಸಿದ...

ALERT : ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 24 ಕೋಟಿ ರೂ. ದೋಖಾ : ದೇಶವನ್ನೇ ಬೆಚ್ಚಿಬೀಳಿಸಿದ ಭೀಕರ ಹಗರಣ !

ಬೆಂಗಳೂರು: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ನಡೆಯುತ್ತಿರುವ ದೇಶದ ಅತಿದೊಡ್ಡ ಸೈಬರ್ ವಂಚನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸಿಬಿಐ (CBI) ಮತ್ತು ಇಡಿ (ED) ಅಧಿಕಾರಿಗಳೆಂದು ನಟಿಸಿ ಬೆದರಿಕೆ ಹಾಕಿದ ವಂಚಕರು, 74 ವರ್ಷದ ನಿವೃತ್ತ ಶಿಕ್ಷಕಿ ಲಕ್ಷ್ಮಿ ರಾಮಮೂರ್ತಿ ಅವರಿಂದ ಬರೋಬ್ಬರಿ 24 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸಲಾಗುವುದು ಎಂದು ಭಯ ಹುಟ್ಟಿಸಿ, 26 ಕಂತುಗಳಲ್ಲಿ ಹಣವನ್ನು ವರ್ಗಾಯಿಸಿಕೊಳ್ಳುವಂತೆ ಮಾಡಿದ್ದಾರೆ. ಇನ್ನೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ, ಮನೆಯಲ್ಲಿದ್ದ 1.30 ಕೆಜಿ ಚಿನ್ನವನ್ನು ಅಡವಿಡಲು ಬ್ಯಾಂಕ್‌ಗೆ ಹೋದಾಗ, ಬ್ಯಾಂಕ್ ಮ್ಯಾನೇಜರ್ ಅವರ ಅಸಹಾಯಕತೆಯನ್ನು ಗಮನಿಸಿ ವಿಚಾರಿಸಿದ್ದಾರೆ. ಆಗ ಈ ಬೃಹತ್ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ಬ್ಯಾಂಕ್ ಮ್ಯಾನೇಜರ್ ಅವರ ಸಮಯಪ್ರಜ್ಞೆಯಿಂದಾಗಿ ಲಕ್ಷ್ಮಿ ರಾಮಮೂರ್ತಿ ಅವರು ಸಿಸಿಬಿ (CCB) ಸೈಬರ್ ಪೊಲೀಸರಿಗೆ ದೂರು ನೀಡಲು ಸಾಧ್ಯವಾಯಿತು.

ಏನಿದು ಪ್ರಕರಣ?

ಶಿವಾಜಿನಗರದ ನಿವಾಸಿ ಲಕ್ಷ್ಮಿ ರಾಮಮೂರ್ತಿ (70) ನಿವೃತ್ತ ಶಿಕ್ಷಕಿ. ಅವರ ಮಕ್ಕಳು ವಿದೇಶದಲ್ಲಿ ನೆಲೆಸಿದ್ದು, ಅವರು ಇಲ್ಲಿ ಒಬ್ಬರೇ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಆಸ್ತಿ ಮಾರಾಟದಿಂದ ಬಂದ ಹಣವನ್ನು ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿ ಇರಿಸಿದ್ದರು. ಇದನ್ನು ಗಮನಿಸಿದ ವಂಚಕರು, ಜನವರಿಯಲ್ಲಿ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಿ ಎಂದು ಆರೋಪಿಸಿ, ‘ಡಿಜಿಟಲ್ ಅರೆಸ್ಟ್’ ಮಾಡಲಾಗಿದೆ ಎಂದು ಹೆದರಿಸಿ, ಬ್ಯಾಂಕ್ ಖಾತೆಯಲ್ಲಿದ್ದ 24 ಕೋಟಿ ರೂ.ಗಳನ್ನು ಹಂತ ಹಂತವಾಗಿ ವರ್ಗಾಯಿಸಿಕೊಳ್ಳುವಂತೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರ ಕಾರ್ಯಾಚರಣೆ:

ದೂರು ದಾಖಲಾದ ನಂತರ ಕಾರ್ಯಾಚರಣೆಗಿಳಿದ ಕರ್ನಾಟಕ ಸೈಬರ್ ಕಮಾಂಡ್ ಯೂನಿಟ್, ವಂಚಕರಿಗೆ ವರ್ಗಾವಣೆಯಾಗುತ್ತಿದ್ದ 3 ಕೋಟಿ ರೂ.ಗಳನ್ನು ತಕ್ಷಣವೇ ತಡೆಹಿಡಿಯಿತು. ದೇಶಾದ್ಯಂತ ಇರುವ ಆರೋಪಿಗಳ ಖಾತೆಗಳನ್ನು ಫ್ರೀಜ್ ಮಾಡುವ ಮೂಲಕ ಒಟ್ಟು 5.46 ಕೋಟಿ ರೂ.ಗಳನ್ನು ಮರುಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು, ಮುಂಬೈ, ಗುಜರಾತ್, ದೆಹಲಿ ಮತ್ತು ಬಿಹಾರ ಮೂಲದ ಆರು ಸೈಬರ್ ಅಪರಾಧಿಗಳನ್ನು ಬಂಧಿಸಲಾಗಿದೆ. ದೆಹಲಿ ಮತ್ತು ಮುಂಬೈನ ಇಬ್ಬರು ಪ್ರಮುಖ ಆರೋಪಿಗಳು ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದ್ದು, ಆರೋಪಿಗಳ ಖಾತೆಗಳಿಂದ 60 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಸುಮಾರು 22ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಚ್ಚರಿಕೆ: ‘ಡಿಜಿಟಲ್ ಅರೆಸ್ಟ್’ ಎಂಬುದು ಸೈಬರ್ ವಂಚಕರ ಕೇವಲ ಒಂದು ಕಟ್ಟುಕಥೆ. ಪೊಲೀಸರು ಅಥವಾ ಸರ್ಕಾರಿ ಅಧಿಕಾರಿಗಳು ಎಂದಿಗೂ ವಿಡಿಯೋ ಕಾಲ್ ಮೂಲಕ ಅಥವಾ ಆನ್‌ಲೈನ್‌ನಲ್ಲಿ ಯಾರನ್ನೂ ‘ಡಿಜಿಟಲ್ ಅರೆಸ್ಟ್’ ಮಾಡುವುದಿಲ್ಲ. ಅಂತಹ ಕರೆಗಳು ಬಂದರೆ ಭಯಪಡದೆ, ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅಥವಾ ಸೈಬರ್ ಕ್ರೈಮ್ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular