24 ಕೋಟಿ ಹಣವನ್ನು ಉದ್ಯೋಗಿಗಳಿಗೆ ಹಂಚಲಿದ್ದಾಳೆ ಈ ಉದ್ಯಮಿ; ಲಕ್ಕಿ ಡ್ರಾ ಮೂಲಕ ಅದೃಷ್ಟವಂತರ ಆಯ್ಕೆ…..!

ಕೆಲವು ಕಡೆಗಳಲ್ಲಿ ಮದುವೆ ಸಂಭ್ರಮದಲ್ಲಿ ನೋಟಿನ ಮಳೆ ಸುರಿಸುವ ಸಂಪ್ರದಾಯವಿದೆ. ಇತ್ತೀಚೆಗಷ್ಟೆ ಬೆಂಗಳೂರಿನಲ್ಲೊಬ್ಬ ಭೂಪ ಅದೇ ರೀತಿ ನೋಟುಗಳನ್ನು ಹಾರಿಬಿಟ್ಟಿದ್ದ. ಇದೀಗ ಮಹಿಳೆಯೊಬ್ಬಳು  24 ಕೋಟಿ ರೂಪಾಯಿ ಹಣವನ್ನು ಜನರಿಗೆ ಹಂಚುವುದಾಗಿ ಘೋಷಿಸಿದ್ದಾಳೆ. ತನ್ನ ಹುಟ್ಟುಹಬ್ಬದಂದು ಈಕೆ ಅನೇಕರಿಗೆ ಹಣವನ್ನು ಉಡುಗೊರೆಯಾಗಿ ನೀಡುತ್ತಾಳಂತೆ. ಈ ಬಿಲಿಯನೇರ್ ಮಹಿಳೆಯ ಹೆಸರು ಗಿನಾ ರೈನ್ಹಾರ್ಟ್, ಈಕೆ ಆಸ್ಟ್ರೇಲಿಯಾದ ನಿವಾಸಿ. 69 ವರ್ಷದ ರೈನ್ಹಾರ್ಟ್ ಬಳಿ 34 ಶತಕೋಟಿ ಡಾಲರ್‌ ಆಸ್ತಿಯಿದೆಯಂತೆ.

ಮೂಲಗಳ ಪ್ರಕಾರ ಈಕೆ ಆಸ್ಟ್ರೇಲಿಯಾದ ಶ್ರೀಮಂತ ವ್ಯಕ್ತಿ. ವಿಶ್ವದ 47ನೇ ಶ್ರೀಮಂತ ವ್ಯಕ್ತಿಯೂ ಹೌದು. ಒಟ್ಟು 41 ಜನರಿಗೆ 24 ಕೋಟಿ ರೂಪಾಯಿಗಳನ್ನು ವಿತರಿಸುವುದಾಗಿ ಗಿನಾ ಘೋಷಿಸಿದ್ದಾರೆ. ಈ 41 ಜನರ ಆಯ್ಕೆ ಲಕ್ಕಿ ಡ್ರಾ ಮೂಲಕ ನಡೆಯಲಿದೆ. ಆದರೆ ಈ ಹಣವನ್ನು ಅವರ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಮಾತ್ರ ನೀಡಲಾಗುತ್ತದೆ ಎಂಬುದು ಗಮನಾರ್ಹ. ಗಿನಾ ರೈನ್ಹಾರ್ಟ್ ಗಣಿಗಾರಿಕೆ, ಇಂಧನ ಮತ್ತು ಕೃಷಿ ಕಂಪನಿಯ ಮಾಲೀಕರಾಗಿದ್ದಾರಂತೆ.

ಅವರ ಕಂಪನಿಯು ಇತ್ತೀಚೆಗೆ ಉತ್ತಮ ಲಾಭವನ್ನು ಗಳಿಸಿದೆ.  ಆದ್ದರಿಂದ ಅವರು ತಮ್ಮ ಉದ್ಯೋಗಿಗಳಿಗೆ ಧನ್ಯವಾದ ಹೇಳಲೆಂದೇ ಇಷ್ಟೆಲ್ಲಾ ಮೊತ್ತವನ್ನು ಕೊಡಲು ಆಕೆ ನಿರ್ಧರಿಸಿದ್ದಾರೆ. ಆಕೆಯ ಔದಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾವೂ ಸಹ ಆ ಕಂಪನಿಯ ಉದ್ಯೋಗಿಗಳಾಗಿದ್ದರೆ ಅದೃಷ್ಟ ಒಲಿಯುತ್ತಿತ್ತು ಎಂದು ಹಲವರು ಅಲವತ್ತುಕೊಳ್ಳುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read