HomeLatest News2027ರ ವಿಶ್ವಕಪ್‌ಗೆ ಗೌತಮ್ ಗಂಭೀರ್ ಬಿಗ್ ಪ್ಲಾನ್: ಶ್ರೇಯಸ್ ಅಯ್ಯರ್ ಜಾಗಕ್ಕೆ ಈ ಯುವ ಆಲ್ರೌಂಡರ್‌ಗೆ...

2027ರ ವಿಶ್ವಕಪ್‌ಗೆ ಗೌತಮ್ ಗಂಭೀರ್ ಬಿಗ್ ಪ್ಲಾನ್: ಶ್ರೇಯಸ್ ಅಯ್ಯರ್ ಜಾಗಕ್ಕೆ ಈ ಯುವ ಆಲ್ರೌಂಡರ್‌ಗೆ ಮಣೆ!

ಮುಂದಿನ 2027ರ ಏಕದಿನ ವಿಶ್ವಕಪ್‌ಗಾಗಿ ಭಾರತೀಯ ಕ್ರಿಕೆಟ್ ತಂಡವು ಈಗಿನಿಂದಲೇ ತನ್ನ ಸಿದ್ಧತೆಯನ್ನು ಆರಂಭಿಸಿದೆ. ಕಳೆದ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಎಡವಿದ್ದ ಭಾರತ ತಂಡ ಈ ಬಾರಿ ದಕ್ಷಿಣ ಆಫ್ರಿಕಾದ ಪಿಚ್‌ಗಳಿಗೆ ಸೂಕ್ತವಾಗುವಂತಹ ಹೊಸ ಮಾದರಿಯ ಬಲಿಷ್ಠ ತಂಡವನ್ನು ಕಟ್ಟಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭಮನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಹೊಸ ಪ್ರಯೋಗಗಳಿಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ತಂಡದ ಪ್ರಮುಖ ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ನಿತೀಶ್ ಕುಮಾರ್ ರೆಡ್ಡಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಮ್ಯಾನೇಜ್‌ಮೆಂಟ್‌ಗೆ ಚಿಂತೆಯುಂಟುಮಾಡಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ ಕನಿಷ್ಠ 4 ಓವರ್ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯವಿರುವ ಆಟಗಾರರ ಅಗತ್ಯವಿದ್ದು, ಶ್ರೇಯಸ್ ಅಯ್ಯರ್‌ಗೆ ಸೂಕ್ತ ಪರ್ಯಾಯವಾಗಿ ಯುವ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಮುಂಚೂಣಿಯಲ್ಲಿ ನಿಲ್ಲಿಸಲಾಗಿದೆ. ಒತ್ತಡದ ಸಮಯದಲ್ಲಿ ರನ್ ಗಳಿಸುವ ಮತ್ತು ಆಫ್-ಸ್ಪಿನ್ ಮೂಲಕ ವಿಕೆಟ್ ಕಬಳಿಸುವ ತಿಲಕ್ ಅವರ ಸಾಮರ್ಥ್ಯ ಬೋರ್ಡ್ ಗಮನ ಸೆಳೆದಿದೆ.

ತಂಡದಲ್ಲಿರುವ ಹಿರಿಯ ಆಟಗಾರರ ವಯಸ್ಸು, ಫಿಟ್ನೆಸ್ ಮತ್ತು ಫೀಲ್ಡಿಂಗ್ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಹೊಸ ರಕ್ತವನ್ನು ತಂಡಕ್ಕೆ ತರಲು ಆಡಳಿತ ಮಂಡಳಿ ಆಲೋಚಿಸುತ್ತಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮುಂದಿನ ವಿಶ್ವಕಪ್ ವೇಳೆಗೆ ವಯಸ್ಸಿನ ಮಿತಿಯಲ್ಲಿರುವುದರಿಂದ ಹಾಗೂ ಜಡೇಜಾ ಅವರ ಲಭ್ಯತೆ ಖಚಿತವಿಲ್ಲದ ಕಾರಣ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಏಕದಿನ ಸರಣಿಗಳಲ್ಲಿ ವಿಶ್ವಕಪ್‌ಗೆ ಅಗತ್ಯವಿರುವ ತಂಡದ ಸ್ವರೂಪದ ಸ್ಪಷ್ಟ ಚಿತ್ರಣ ಸಿಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular