2023 ರ ಸಾರ್ವತ್ರಿಕ ರಜಾ ದಿನದ ಕುರಿತು ಇಲ್ಲಿದೆ ಒಂದು ಮಹತ್ವದ ಮಾಹಿತಿ

ರಾಜ್ಯ ಸರ್ಕಾರ 2023 ರ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಈ ಹಿಂದೆ ಪ್ರಕಟಿಸಿದ್ದು, ಇದೀಗ ಅದರಲ್ಲಿ ಒಂದು ಬದಲಾವಣೆಯನ್ನು ಮಾಡಿದೆ.

ಮಹಾವೀರ ಜಯಂತಿ ಪ್ರಯುಕ್ತ ಈ ಹಿಂದೆ ಏಪ್ರಿಲ್ 3 ರ ಸೋಮವಾರವನ್ನು ರಜಾ ದಿನವನ್ನಾಗಿ ಘೋಷಿಸಿದ್ದು, ಇದೀಗ ಅದರ ಬದಲು ಏಪ್ರಿಲ್ 4 ರ ಮಂಗಳವಾರವನ್ನು ರಜಾ ದಿನವಾಗಿ ಓದಿಕೊಳ್ಳುವಂತೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಲಾಗಿದೆ.

ಇನ್ನುಳಿದಂತೆ ಇತರ ರಜಾ ದಿನಗಳು ಯಥಾರೀತಿಯಲ್ಲಿ ಮುಂದುವರಿಯುತ್ತದೆ. ಇನ್ನುಳಿದಂತೆ ರಜಾ ದಿನಗಳ ಸಂಪೂರ್ಣ ಪಟ್ಟಿ ಇಂತಿದೆ.

ಜನವರಿ 26 – ಗುರುವಾರ – ಗಣರಾಜ್ಯೋತ್ಸವ

ಫೆಬ್ರವರಿ 18 – ಶನಿವಾರ – ಮಹಾಶಿವರಾತ್ರಿ

ಮಾರ್ಚ್ 22 – ಬುಧವಾರ – ಯುಗಾದಿ ಹಬ್ಬ

ಏಪ್ರಿಲ್ 4 – ಮಂಗಳವಾರ – ಮಹಾವೀರ ಜಯಂತಿ

ಏಪ್ರಿಲ್ 7 – ಶುಕ್ರವಾರ – ಗುಡ್ ಫ್ರೈಡೆ

ಏಪ್ರಿಲ್ 14 – ಶುಕ್ರವಾರ – ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ

ಮೇ 1 – ಸೋಮವಾರ – ಕಾರ್ಮಿಕ ದಿನಾಚರಣೆ

ಜೂನ್ 29 – ಗುರುವಾರ – ಬಕ್ರೀದ್

ಜುಲೈ 29 – ಶನಿವಾರ – ಮೊಹರಂ ಕಡೆ ದಿನ

ಆಗಸ್ಟ್ 15 – ಮಂಗಳವಾರ – ಸ್ವಾತಂತ್ರ್ಯ ದಿನಾಚರಣೆ

ಸೆಪ್ಟೆಂಬರ್ 18 – ಸೋಮವಾರ – ವರಸಿದ್ಧಿ ವಿನಾಯಕ ವೃತ

ಸೆಪ್ಟೆಂಬರ್ 28 – ಗುರುವಾರ – ಈದ್ ಮಿಲಾದ್

ಅಕ್ಟೋಬರ್ 2 – ಸೋಮವಾರ – ಗಾಂಧಿ ಜಯಂತಿ

ಅಕ್ಟೋಬರ್ 23 – ಸೋಮವಾರ – ಮಹಾನವಮಿ – ಆಯುಧ ಪೂಜೆ

ಅಕ್ಟೋಬರ್ 24 – ಮಂಗಳವಾರ – ವಿಜಯದಶಮಿ

ನವೆಂಬರ್ 1 – ಬುಧವಾರ – ಕನ್ನಡ ರಾಜ್ಯೋತ್ಸವ

ನವೆಂಬರ್ 14 – ಮಂಗಳವಾರ – ಬಲಿಪಾಡ್ಯಮಿ, ದೀಪಾವಳಿ

ನವೆಂಬರ್ 30 – ಗುರುವಾರ – ಕನಕದಾಸ ಜಯಂತಿ

ಡಿಸೆಂಬರ್ 25 – ಸೋಮವಾರ – ಕ್ರಿಸ್ಮಸ್

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (ಜನವರಿ 15), ಬಸವ ಜಯಂತಿ / ಅಕ್ಷಯ ತೃತೀಯ (ಏಪ್ರಿಲ್ 23), ನರಕ ಚತುರ್ದಶಿ (ನವೆಂಬರ್ 12) ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮಾವಾಸ್ಯೆ (ಅಕ್ಟೋಬರ್ 14), ಹಾಗೂ ನಾಲ್ಕನೇ ಶನಿವಾರದಂದು ಬರುವ ಕುತುಬ್ ಎ ರಂಜಾನ್ (ಏಪ್ರಿಲ್ 22) ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ (ಅಕ್ಟೋಬರ್ 28) ಈ ರಜೆಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

ಹಾಗೆಯೇ ಮುಸಲ್ಮಾನ್ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಂ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read