HomeKarnatakaSHOCKING NEWS: ಕೇವಲ 20 ರೂಪಾಯಿಗಾಗಿ ಕ್ಯಾಷಿಯರ್ ಗೆ ಚಾಕು ಇರಿತ: ಇಬ್ಬರು ಅರೆಸ್ಟ್

SHOCKING NEWS: ಕೇವಲ 20 ರೂಪಾಯಿಗಾಗಿ ಕ್ಯಾಷಿಯರ್ ಗೆ ಚಾಕು ಇರಿತ: ಇಬ್ಬರು ಅರೆಸ್ಟ್

ಬೆಂಗಳೂರು: ಕೇವಲ 20 ರೂಪಾಯಿಗಾಗಿ ಕಿಡಿಗೇದಿಗಳು ಬಾರ್ ಕ್ಯಾಷಿಯರ್ ಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕ್ಯಾಷಿಯರ್ ರಂಜಿತ್ ಗಂಭೀರವಾಗಿ ಗಲ್ಲೆಗೊಳಗಾದ ವ್ಯಕ್ತಿ. ಮೂವರು ಕಿಡಿಗೇಡಿಗಳು ರಂಜಿತ್ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ನರಸೀಪುರದ ಜಯಶ್ರೀ ಬಾರ್ ನಲ್ಲಿ ಕುಡಿಯಲು ಬಂದಿದ್ದ ಚೇತನ್ , ಕಾರ್ತಿಕ್ ಹಾಗೂ ಮತ್ತೋರ್ವ ಸೇರಿ ಮೂವರು ಗಲಾಟೆ ಮಾಡಿದ್ದರು. ಬಾರ್ ಕ್ಯಾಷಿಯರ್ 20 ರೂಪಾಯಿ ಹೆಚ್ಚಿಗೆ ಬಿಲ್ ಹಾಕಿದ್ದಾನೆ ಎಂದು ಕ್ಯಾತೆ ತೆಗೆದಿದ್ದಾರೆ. ಇದೇ ವಿಚಾರವಾಗಿ ಜಗಳ ಶುರುಮಾಡಿದ ಕಿಡಿಗೇಡಿಗಳು ಕ್ಯಾಷಿಯರ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ಸಂಬಂಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚೇತನ್, ಕಾರ್ತಿಕ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular