20 ರೂಪಾಯಿಗೆ ಖರೀದಿಸುವ ಕುಡಿಯುವ ನೀರಿನ ಬಾಟಲಿ ನಿಜವಾದ ಬೆಲೆ ತಿಳಿದ್ರೆ ಅಚ್ಚರಿಪಡ್ತೀರಿ….!

ಸಾಮಾನ್ಯವಾಗಿ ನಾವು ಪ್ರವಾಸ, ಪಿಕ್‌ನಿಕ್‌ ಹೋದಾಗಲೆಲ್ಲ ಅಂಗಡಿ, ಹೋಟೆಲ್‌ಗಳಲ್ಲಿ ಕುಡಿಯುವ ನೀರಿನ ಬಾಟಲಿ ಖರೀದಿಸುತ್ತೇವೆ. ಪ್ರತಿ ಲೀಟರ್‌ಗೆ 20 ರೂಪಾಯಿ ದರದಲ್ಲಿ ನೀರಿನ ಬಾಟಲಿಯನ್ನು ಮಾರಾಟ ಮಾಡಲಾಗುತ್ತದೆ. ನೀರನ್ನು ಫಿಲ್ಟರ್ ಮಾಡಿ ಅತ್ಯಂತ ಶುದ್ಧವಾಗಿ ತಯಾರಿಸಲಾಗುತ್ತದೆ ಎಂದು ಕಂಪನಿಗಳು ಹೇಳಿಕೊಳ್ಳುತ್ತವೆ. ಅದಕ್ಕಾಗಿಯೇ ಆ ನೀರಿನ ಬೆಲೆ ಹೆಚ್ಚು. ಆದರೆ ಕಂಪನಿಗಳ ಈ ಹೇಳಿಕೆ ಎಷ್ಟು ನಿಜ ಎಂಬುದು ಪ್ರಶ್ನೆ.

ನಮಗೆ 20 ರೂಪಾಯಿಗೆ ಸಿಗುವ ನೀರಿನ ಬಾಟಲಿಯ ನಿಜವಾದ ಬೆಲೆ ಎಷ್ಟು ?  ‘ದಿ ಅಟ್ಲಾಂಟಿಕ್’ ನಲ್ಲಿ ಅರ್ಥಶಾಸ್ತ್ರಜ್ಞ ಡೆರೆಕ್ ಥಾಂಪ್ಸನ್ ಪ್ಯಾಕೇಜ್ಡ್ ಕುಡಿಯುವ ನೀರಿನ ವೆಚ್ಚದ ವ್ಯವಹಾರವನ್ನು ವಿಶ್ಲೇಷಿಸಿದ್ದಾರೆ. ಡೆರೆಕ್ ಥಾಂಪ್ಸನ್ ಪ್ರಕಾರ, ಬೃಹತ್ ಪ್ರಮಾಣದಲ್ಲಿ ತಯಾರಿಸುವುದರಿಂದ  ಕಂಪನಿಗಳು ಒಂದು ಲೀಟರ್ ಪ್ಲಾಸ್ಟಿಕ್ ಬಾಟಲಿಗೆ 80 ಪೈಸೆ ಪಾವತಿಸಬೇಕಾಗುತ್ತದೆ. ಒಂದು ಲೀಟರ್ ನೀರಿನ ಬೆಲೆ 1 ರೂಪಾಯಿ 20 ಪೈಸೆ ಬರುತ್ತದೆ.

ನೀರನ್ನು ಶುದ್ಧೀಕರಿಸಲು ತಗಲುವ ವೆಚ್ಚ 3 ರೂಪಾಯಿ 40 ಪೈಸೆ. ಹೆಚ್ಚುವರಿ ವೆಚ್ಚವಾಗಿ ಕಂಪನಿಯು 1 ರೂಪಾಯಿ ಖರ್ಷು ಮಾಡುತ್ತದೆ. ಹೀಗೆ ಎಲ್ಲ ಖರ್ಚು ಭರಿಸಿ ಕಂಪನಿಗಳು 6 ರೂಪಾಯಿ 40 ಪೈಸೆಗೆ ನೀರಿನ ಬಾಟಲಿ ಪಡೆಯುತ್ತಿವೆ. ಅದನ್ನು 20 ರೂಪಾಯಿಗೆ ಮಾರಾಟ ಮಾಡಿ 3 ಪಟ್ಟು ಹೆಚ್ಚು ಲಾಭ ಗಳಿಸುತ್ತಿವೆ.

ದುಬಾರಿ ನೀರು ಸುರಕ್ಷಿತವೇ ?

ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅನ್ನು ಇಷ್ಟು ದುಬಾರಿ ಬೆಲೆಗೆ ಖರೀದಿಸಿದ ನಂತರವೂ ಆ ನೀರು ಸುರಕ್ಷಿತವೇ ಎಂಬುದು ಪ್ರಶ್ನೆ. ದುಬಾರಿ ಬ್ರಾಂಡ್ ನೀರು ಶುದ್ಧತೆಯ ಸಂಕೇತವಲ್ಲ. ಭಾರತ ಸರ್ಕಾರವು 2014-15ನೇ ಸಾಲಿನಲ್ಲಿ ಬಾಟಲಿ ನೀರಿನ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಿತ್ತು. ಅದರ ಫಲಿತಾಂಶಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬ್ರಾಂಡ್‌ಗಳ ಗುಣಮಟ್ಟ ಕಳಪೆಯಾಗಿದೆ ಎಂಬುದು ಬಹಿರಂಗವಾಗಿತ್ತು. ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ನೀರಿನ ಗುಣಮಟ್ಟ ಕಳಪೆಯಾಗಿತ್ತು.

ಕಳೆದ 20 ವರ್ಷಗಳಿಂದ ಭಾರತದಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರಿನ ವ್ಯವಹಾರವು ವೇಗವಾಗಿ ಬೆಳೆಯುತ್ತಿದೆ. ಇದು ಮೊದಲು ಪ್ರಾರಂಭವಾಗಿದ್ದು ಪಾಶ್ಚಿಮಾತ್ಯ ದೇಶಗಳಲ್ಲಿ. ಈಗ ಸಂಪೂರ್ಣವಾಗಿ ತನ್ನ ಬೇರುಗಳನ್ನು ಭಾರತದಲ್ಲೂ ಸ್ಥಾಪಿಸಿದೆ. ದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯ ಜೊತೆಗೆ ಕುಡಿಯುವ ನೀರಿನ ಬಾಟಲಿಗಳ ಮಾರಾಟವೂ ಜೋರಾಗಿದೆ. ಪ್ರಸ್ತುತ  ಭಾರತದಲ್ಲಿ 5 ಸಾವಿರಕ್ಕೂ ಹೆಚ್ಚು ತಯಾರಕರು ಬಾಟಲಿ ನೀರಿನ ವ್ಯಾಪಾರದಲ್ಲಿ ತೊಡಗಿದ್ದಾರೆ. ಅವರು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪರವಾನಗಿಯನ್ನು ಹೊಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read