Viral Video | ರೈಲಿನಲ್ಲಿ ಚಪ್ಪಲಿ ಹಿಡಿದು ಜಗಳ ಮಾಡಿದ ಯುವತಿಯರು…..!

ಮುಂಬೈ ಲೋಕಲ್ ರೈಲುಗಳು ಅಥವಾ ದೆಹಲಿ ಮೆಟ್ರೋ ಆಗಿರಬಹುದು, ಸಾರಿಗೆಗಳಲ್ಲಿ ಗಲಾಟೆ ನಡೆಯುವುದು ಮಾಮೂಲು. ಈಗ ಅಂಥದ್ದೇ ಒಂದು ಯುವತಿಯರ ಗಲಾಟೆ ವಿಡಿಯೋ ವೈರಲ್​ ಆಗಿದೆ.

‘ಘರ್ ಕೆ ಕಾಲೇಶ್’ ಎಂಬ ಟ್ವಿಟರ್ ಹ್ಯಾಂಡಲ್‌ನಿಂದ ಅಪ್‌ಲೋಡ್ ಮಾಡಲಾದ ವೀಡಿಯೊ ಇದಾಗಿದೆ. ಇಬ್ಬರು ಯುವತಿಯರು ದೆಹಲಿ ಮೆಟ್ರೋದೊಳಗೆ ಜಗಳದಲ್ಲಿ ತೊಡಗಿಸಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮೆಟ್ರೋದಲ್ಲಿ ಸೀಟಿಗಾಗಿ ಜಗಳ ನಡೆದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಗಮನಿಸಲಾಗಿದೆ.

ಯುವತಿಯೊಬ್ಬಳು ತನ್ನ ಪಾದರಕ್ಷೆಗಳನ್ನು ಹೊರತೆಗೆದು ತನ್ನ ಕೈಯಲ್ಲಿ ಹಿಡಿದುಕೊಂಡು ಇನ್ನೊಬ್ಬ ಹೆಣ್ಣಿಗೆ ಬೆದರಿಕೆ ಹಾಕುವುದನ್ನು ಮತ್ತು ಹೊಡೆಯುವುದನ್ನು ವಿಡಿಯೋ ಮಾಡಲಾಗಿದೆ. ಆಗ ಮತ್ತೊಬ್ಬಳು ನೀರಿನ ಬಾಟಲಿಯನ್ನು ಹೊರಕ್ಕೆ ತೆಗೆದುಕೊಂಡು ಪ್ರತಿರೋಧ ಒಡ್ಡಿದ್ದಾಳೆ.

ವೈರಲ್ ವೀಡಿಯೊದಲ್ಲಿ ಕಂಡುಬರುವಂತೆ, ಸುತ್ತಮುತ್ತಲಿನ ಜನರು ಸಮಸ್ಯೆಯನ್ನು ಇತ್ಯರ್ಥಪಡಿಸಲು ಮತ್ತು ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ವೈರಲ್​ ವಿಡಿಯೋ ನೋಡಿ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

 

https://twitter.com/Arhantt_pvt/status/1640961562382073857

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read