
2 ದಿನ ಏನೇನು ನಡೆಯಲಿದೆ, ಸಭೆಯ ವೇಳಾಪಟ್ಟಿಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
G20 ಶೃಂಗಸಭೆ ವೇಳಾಪಟ್ಟಿ
ಸೆಪ್ಟೆಂಬರ್ 9 : ಮೊದಲನೇ ದಿನದ ವೇಳಾಪಟ್ಟಿ
ಬೆಳಗ್ಗೆ 09.30ರಿಂದ 10.30ರವರೆಗೆ ಭಾರತ ಮಂಟಪದ ಶೃಂಗಸಭೆಯ ಸ್ಥಳದಲ್ಲಿ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರ ಆಗಮನ ಕಾರ್ಯಕ್ರಮ ಬಳಿಕ ಭಾರತ್ ಮಂಟಪದಲ್ಲಿ ಪ್ರಧಾನ ಮಂತ್ರಿ ಜೊತೆ ಸ್ವಾಗತ ಫೋಟೋಶೂಟ್ ಕಾರ್ಯಕ್ರಮ ನಡೆಯಲಿದೆ.
ನಂತರ 10.30-1.30ರವರೆಗೆ ಸೆಷನ್ 1 ನಡೆಯಲಿದ್ದು, ಶೃಂಗಸಭೆ ಸಭಾಂಗಣದಲ್ಲಿ ಒಂದು ಭೂಮಿ ಕುರಿತು ಸಮಾವೇ ನಡೆಯಲಿದೆ.
ನಂತರ 1.30-3.00ರವರೆಗೆ ಭಾರತ ಮಂಟಪದಲ್ಲಿ ದ್ವಿಪಕ್ಷೀಯ ಸಭೆ ನಡೆಯಲಿದೆ.
3.00-4.45ರವರೆಗೆ ಸೆಷನ್ II: ಶೃಂಗಸಭೆ ಸಭಾಂಗಣದಲ್ಲಿ ಭಾರತ ಮಂಟಪದ ಹಂತ 1ರಲ್ಲಿ ಒಂದು ಕುಟುಂಬ ಕುರಿತು ಸಮಾವೇಶ ನಡೆಯಲಿದೆ. ನಂತರ ಹೋಟೆಲ್ಗಳಿಗೆ ತೆರಳಲಿದ್ದಾರೆ.
ಬಳಿಕ 7.00-8.00ರವರೆಗೆ ಭೋಜನಕ್ಕೆ ವಿಶ್ವ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನವಾಗಲಿದೆ.
* 8.00-9.15 ಊಟದ ನಡುವೆ ಮಾತುಕತೆ ನಡೆಯಲಿದೆ.
9.10-9.45ರವರೆಗೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರು ಲೀಡರ್ಸ್ ಲಾಂಜ್, ಭಾರತ ಮಂಟಪದ ಲೆವೆಲ್ 2 ನಲ್ಲಿ ಸೇರುತ್ತಾರೆ. ನಂತರ ಹೋಟೆಲ್ಗಳಿಗೆ ನಿರ್ಗಮ ವಾಸ್ತವ್ಯ.
ದಿನ 2: ಸೆಪ್ಟೆಂಬರ್ 10
ನಾಡಿದ್ದು ಬೆಳಗ್ಗೆ 8.15ರಿಂದ 9.00ರವರೆಗೆ ರಾಜ್ಘಾಟ್ಕ್ಕೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರ ಆಗಮನವಾಗಲಿದೆ. ನಂತರ ರಾಜ್ಘಾಟ್ನಲ್ಲಿರುವ ನಾಯಕರ ಲಾಂಜ್ನಲ್ಲಿ ಶಾಂತಿ ಗೋಡೆ ಮೇಲೆ ಸಹಿ ಹಾಕುತ್ತಾರೆ.
9.00-9.20ರ ನಡುವೆ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಮಹಾತ್ಮ ಗಾಂಧಿಯವರ ನೆಚ್ಚಿನ ಭಕ್ತಿಗೀತೆಗಳ ಪ್ರದರ್ಶನ ಕೂಡ ನಡೆಯಲಿದೆ.
9.20ಕ್ಕೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ನಾಯಕರ ಲೌಂಜ್ಗೆ ತೆರಳುತ್ತಾರೆ. ಅಲ್ಲಿಂದ ಪ್ರತ್ಯೇಕ ಮೋಟರ್ಕೇಡ್ಗಳಲ್ಲಿ ಭಾರತ ಮಂಟಪಕ್ಕೆ ನಿರ್ಗಮಿಸಲಿದ್ದಾರೆ.
9.40-10.15ಕ್ಕೆ ಭಾರತ ಮಂಟಪಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನ.ನಂತರ 10.15-10.28ರವರೆಗೆ ಸೌತ್ ಪ್ಲಾಜಾ, ಲೆವೆಲ್ 2, ಭಾರತ್ ಮಂಟಪದಲ್ಲಿ ಮರ ನೆಡುವ ಕಾರ್ಯಕ್ರಮ.
10.30-12.30ರವರೆಗೆ ಶೃಂಗಸಭೆ ಸಭಾಂಗಣದಲ್ಲಿ ಭಾರತ ಮಂಟಪ ಹಂತ 2ರಲ್ಲಿ ಒಂದು ಭವಿಷ್ಯ ಕುರಿತು ಸಮಾವೇಶ ನಡೆಯಲಿದೆ.

