HomeLatest Newsಅಮೇರಿಕಾ ಅಮೇರಿಕಾ 2 ಸಿನಿಮಾದ ಮೊದಲ ಹಾಡು ಆಗಸ್ಟ್ 12ಕ್ಕೆ ರಿಲೀಸ್: ಹಳೆಯ ಮ್ಯಾಜಿಕ್ ಮರುಕಳಿಸುವ...

ಅಮೇರಿಕಾ ಅಮೇರಿಕಾ 2 ಸಿನಿಮಾದ ಮೊದಲ ಹಾಡು ಆಗಸ್ಟ್ 12ಕ್ಕೆ ರಿಲೀಸ್: ಹಳೆಯ ಮ್ಯಾಜಿಕ್ ಮರುಕಳಿಸುವ ನಿರೀಕ್ಷೆ

ಕನ್ನಡ ಚಿತ್ರರಂಗದ ಸಾರ್ವಕಾಲಿಕ ಹಿಟ್ ಸಿನಿಮಾಗಳಲ್ಲಿ ಒಂದಾದ ‘ಅಮೇರಿಕಾ ಅಮೇರಿಕಾ’ ಚಿತ್ರದ ಸೀಕ್ವೆಲ್ ‘ಅಮೇರಿಕಾ ಅಮೇರಿಕಾ 2’ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಬಹುನಿರೀಕ್ಷಿತ ಚಿತ್ರದ ಮೊದಲ ಹಾಡು ಆಗಸ್ಟ್ 12ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

ಹಳೆಯ ‘ಅಮೇರಿಕಾ ಅಮೇರಿಕಾ’ ಚಿತ್ರದ ಮಧುರ ಗೀತೆಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿವೆ. ಈಗಿನ ಸೀಕ್ವೆಲ್‌ನಲ್ಲೂ ಅದೇ ರೀತಿಯ ರಸದೌತಣ ನೀಡಲು ಸಂಗೀತ ನಿರ್ದೇಶಕ ಮನೋ ಮೂರ್ತಿ ಮತ್ತೆ ಕೈಜೋಡಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಸಾಹಿತ್ಯ ಬರೆದಿರುವ ಈ ಮೊದಲ ಹಾಡಿಗೆ ಖ್ಯಾತ ಗಾಯಕರಾದ ಶ್ರೇಯಾ ಘೋಷಾಲ್ ಹಾಗೂ ಶಂಕರ್ ಮಹಾದೇವನ್ ಧ್ವನಿಯಾಗಿದ್ದು, ಸಂಗೀತ ಪ್ರಿಯರಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.

ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸ್ವತಃ ನಾಗತಿಹಳ್ಳಿ ಚಂದ್ರಶೇಖರ್ ಅವರೇ ಕಥೆ, ಸಂಭಾಷಣೆ ಬರೆದು ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ್ ಮತ್ತು ಪೃಥ್ವಿ ಅಂಬಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರಕ್ಕೆ ಎಸ್ ಕೆ ರಾವ್ ಛಾಯಾಗ್ರಹಣ ಮಾಡಿದ್ದು, ಶ್ರೀ ಕ್ರೇಜಿ ಮೈಂಡ್ಜ್ ಸಂಕಲನದ ಹೊಣೆ ನಿರ್ವಹಿಸಿದ್ದಾರೆ. ಹಿನ್ನೆಲೆ ಸಂಗೀತವನ್ನು ನಕುಲ್ ಅಭಯಂಕರ್ ನೀಡಿದ್ದಾರೆ. ಹಳೆಯ ಮೆಲೋಡಿ ಹವಾ ಮತ್ತೆ ಮರುಕಳಿಸಲಿದೆಯೇ ಎಂಬುದನ್ನು ನೋಡಲು ಆಗಸ್ಟ್ 12ರವರೆಗೆ ಕಾಯಬೇಕಿದೆ.

https://www.instagram.com/p/DbvfB4mGP42

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular