ತನ್ನ ಟೈಟಲ್ ನಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ನಂದಕುಮಾರ್ ಸಿಎಂ ನಿರ್ದೇಶನದ ಅರುಣ್ ಅಭಿನಯದ 1990’s ಇದೇ ಫೆಬ್ರವರಿ 28ರಂದು ಸುಮಾರು ಐದು ಭಾಷೆಗಳಲ್ಲಿ ತೆರೆ ಕಾಣಲಿದ್ದು, ಚಿತ್ರತಂಡ ಯೂಟ್ಯೂಬ್ ನಲ್ಲಿ ಟ್ರೈಲರ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.
ಈ ಚಿತ್ರದ ಟ್ರೈಲರ್ ಇದೇ ಫೆಬ್ರವರಿ 10ರಂದು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ರಿಲೀಸ್ ಆಗಲಿದೆ.
ಈ ಚಿತ್ರವನ್ನು ಮನಸು ಮಲ್ಲಿಗೆ ಕಂಬೈನ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ಅರುಣ್ ಮತ್ತು ರಾಣಿ ವಾರದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. e.c ಮಹಾರಾಜ್ ಸಂಗೀತ ಸಂಯೋಜನೆ ನೀಡಿದ್ದು, ಕೃಷ್ಣ ಸಂಕಲನ, ಅಶೋಕ್ ಸಾಹಸ ನಿರ್ದೇಶನ, ಹಾಲೇಶ್ ಛಾಯಾಗ್ರಹಣ, ಹಾಗೂ ಸಾದಿಕ್ ಸರ್ದಾರ್ ನೃತ್ಯ ನಿರ್ದೇಶನವಿದೆ.