HomeIndiaಮೊಬೈಲ್ ರಿಪೇರಿ ಮಾಡಲು ನಿರಾಕರಿಸಿದ ಪೋಷಕರು; ಯುವತಿ ಆತ್ಮಹತ್ಯೆ

ಮೊಬೈಲ್ ರಿಪೇರಿ ಮಾಡಲು ನಿರಾಕರಿಸಿದ ಪೋಷಕರು; ಯುವತಿ ಆತ್ಮಹತ್ಯೆ

ಮೊಮೈಲ್ ಫೋನ್ ರಿಪೇರಿ ಮಾಡಿಸಲು ಪೋಷಕರು ನಿರಾಕರಿಸಿದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ವೆಲಲ ಗ್ರಾಮದಲ್ಲಿ ನಡೆದಿದೆ.

19 ವರ್ಷದ ಸೈಶುಮಾ ಆತ್ಮಹತ್ಯೆ ಮಾಡಿಕೊಂಡವಳು. ಪ್ರಥಮ ವರ್ಷದ ಪದವಿ ಓದುತ್ತಿದ್ದಳು. ಸೈಶುಮಾಳ ಸ್ಮಾರ್ಟ್ ಫೋನ್ ಹಾಳಾಗಿತ್ತು. ಇದರಿಂದ ಪೋಷಕರ ಬಳಿ ಮೊಬೈಲ್ ಸರಿ ಮಾಡಿಸಿಕೊಡಲು ಹೇಳಿದ್ದಳು. ಇದಕ್ಕೆ ಪೋಷಕರು ನಿರಾಕರಿಸಿದ್ದಾರೆ.

ಸೈಶುಮಾ ಪೋಷಕರು ಗದ್ದೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮನೆಯಿಂದ ಹೊರ ಹೋಗಿದ್ದ ಯುವತಿ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular