BREAKING: ಹಬ್ಬದ ಹೊತ್ತಲ್ಲೇ ಗ್ರಾಹಕರಿಗೆ ಶಾಕ್: ಗ್ಯಾಸ್ ಸಿಲಿಂಡರ್ ದರ ಹೆಚ್ಚಳ: ವಾಣಿಜ್ಯ ಸಿಲಿಂಡರ್ ದರ 48.50 ರೂ. ಏರಿಕೆ

ನವದೆಹಲಿ: ಹಬ್ಬದ ಸಂದರ್ಭದಲ್ಲೇ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡುವ ಮೂಲಕ ತೈಲ ಕಂಪನಿಗಳು ಗ್ರಾಹಕರಿಗೆ ಶಾಕ್ ನೀಡಿದೆ.

19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 48.50 ರೂ. ಹೆಚ್ಚಿಸಲಾಗಿದೆ. ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 1740 ರೂ. ಆಗಿದೆ. ಆದರೆ, ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೆಹಲಿಯಲ್ಲಿ ಗೃಹಬಳಕೆ ಸಿಲಿಂಡರ್ ದರ 803 ರೂ. ಇದೆ.

ಇಂದಿನಿಂದ ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ದರ 1692.50 ರೂ., ಕೋಲ್ಕತ್ತಾದಲ್ಲಿ 1850.50 ರೂ. ಮತ್ತು ಚೆನ್ನೈನಲ್ಲಿ 1903 ರೂ. ದರ ಇದೆ. ಸೆಪ್ಟೆಂಬರ್‌ನಲ್ಲಿಯೂ ಸಹ ದರ ಸುಮಾರು 39 ರೂ.ಗಳಷ್ಟು ಏರಿಕೆಯಾಗಿತ್ತು.

ವಾಣಿಜ್ಯ ಗ್ಯಾಸ್ ಸಿಲಿಂಡರ್‌ ದರ ಹೆಚ್ಚಳದಿಂದಾಗಿ, ರೆಸ್ಟೋರೆಂಟ್‌, ಹೋಟೆಲ್‌ ಗಳಲ್ಲಿ ಕಾಫಿ, ಟೀ, ತಿಂಡಿ, ಊಟದ ದರಗಳಲ್ಲಿ ಏರಿಕೆಯಾಗಬಹುದು. ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ದರ 48.50 ರೂಪಾಯಿ ಬೆಲೆ ಏರಿಕೆ ನಂತರ 1,818 ರೂ.ಗೆ ತಲುಪಿದೆ.

ಅಕ್ಟೋಬರ್ 1, 2024 ರಂತೆ, 19 ಕೆಜಿಯ ವಾಣಿಜ್ಯ LPG ಸಿಲಿಂಡರ್‌ನ ಬೆಲೆ 48.50 ರೂ.ಗಳಷ್ಟು ಹೆಚ್ಚಾಗಿದೆ. ಬೆಲೆ ಏರಿಕೆ ನಂತರ ಮಹಾನಗರಗಳಲ್ಲಿ ದರ ಇಂತಿದೆ.

ದೆಹಲಿ: 19 ಕೆಜಿ ಸಿಲಿಂಡರ್ ಬೆಲೆ 1740 ರೂ.

ಕೋಲ್ಕತ್ತಾ: 19 ಕೆಜಿ ಸಿಲಿಂಡರ್ ಬೆಲೆ 1850 ರೂ.

ಮುಂಬೈ: 19 ಕೆಜಿ ಸಿಲಿಂಡರ್ ಬೆಲೆ 1692 ರೂ.

ಚೆನ್ನೈ: 19 ಕೆಜಿ ಸಿಲಿಂಡರ್ ಬೆಲೆ 1903 ರೂ.

14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಬದಲಾಗದೆ ಉಳಿದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read