HomeLatest NewsBREAKING : 17 ವರ್ಷದ ಪಾಕಿಸ್ತಾನಿ ಟಿಕ್’ಟಾಕ್ ಸ್ಟಾರ್ 'ಸನಾ ಯೂಸುಫ್' ಗೆ ಗುಂಡಿಕ್ಕಿ ಹತ್ಯೆ

BREAKING : 17 ವರ್ಷದ ಪಾಕಿಸ್ತಾನಿ ಟಿಕ್’ಟಾಕ್ ಸ್ಟಾರ್ ‘ಸನಾ ಯೂಸುಫ್’ ಗೆ ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದ 17 ವರ್ಷದ ಟಿಕ್’ಟಾಕ್ ಸ್ಟಾರ್ ಸನಾ ಯೂಸುಫ್ ಅವರನ್ನು ಇಸ್ಲಾಮಾಬಾದ್ನಲ್ಲಿರುವ ಅವರ ಮನೆಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು, ಇದು ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣವಾಗಿದೆ ಎನ್ನಲಾಗಿದೆ.

ಈ ಘಟನೆ ಸೋಮವಾರ ನಡೆದಿದ್ದು, ವರದಿಯ ಪ್ರಕಾರ, ಸನಾ ಮೇಲೆ ಅಪರಿಚಿತ ದುಷ್ಕರ್ಮಿಯೊಬ್ಬರು ಹತ್ತಿರದಿಂದ ಗುಂಡು ಹಾರಿಸಿದ್ದಾರೆ.

ಬಂದೂಕುಧಾರಿ ಆಕೆಯ ಮನೆಗೆ ನುಗ್ಗಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಚಿತ್ರಾಲ್ ಮೂಲದ ಸನಾ, ತನ್ನ ಟಿಕ್ಟಾಕ್ ವೀಡಿಯೊಗಳ ಮೂಲಕ ಜನಪ್ರಿಯತೆ ಗಳಿಸಿದ್ದಳು. ಇನ್ಸ್ಟಾಗ್ರಾಮ್ನಲ್ಲಿ ಆಕೆಗೆ ಐದು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳಿದ್ದರು. ಪ್ರಕರಣದ ಶಂಕಿತ ವ್ಯಕ್ತಿ ಸನಾ ಅವರ ನಿವಾಸಕ್ಕೆ ಅತಿಥಿಯಾಗಿ ಬಂದಿದ್ದಿರಬಹುದು ಎಂದು ಇತರ ಸ್ಥಳೀಯ ಮಾಧ್ಯಮ ವರದಿಗಳು ಸೂಚಿಸಿವೆ. “ಇಸ್ಲಾಮಾಬಾದ್ನ ಸೆಕ್ಟರ್ ಜಿ -13 ರಲ್ಲಿ ವಾಸಿಸುತ್ತಿದ್ದ ಅಪ್ಪರ್ ಚಿತ್ರಾಲ್ನ ಸನಾ ಯೂಸುಫ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದಿದ್ದ ಅತಿಥಿಯೊಬ್ಬರು ಗುಂಡು ಹಾರಿಸಿ ಕೊಂದಿದ್ದಾರೆ. ಘಟನೆಯ ನಂತರ ಹಲ್ಲೆಕೋರ ಸ್ಥಳದಿಂದ ಪರಾರಿಯಾಗಿದ್ದು, ಶಂಕಿತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular