HomeCrime16 ವರ್ಷದ ಅಪ್ರಾಪ್ತೆ ಮೇಲೆ ಶಾಲೆಯಲ್ಲೇ ಅತ್ಯಾಚಾರ; ಆರೋಪಿ ಸೆರೆಗೆ ಕಾರಣವಾಯ್ತು ಹಳದಿ ಶರ್ಟ್

16 ವರ್ಷದ ಅಪ್ರಾಪ್ತೆ ಮೇಲೆ ಶಾಲೆಯಲ್ಲೇ ಅತ್ಯಾಚಾರ; ಆರೋಪಿ ಸೆರೆಗೆ ಕಾರಣವಾಯ್ತು ಹಳದಿ ಶರ್ಟ್

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಘಾತಕಾರಿ ಕೃತ್ಯವೊಂದು ನಡೆದಿದೆ. 16 ವರ್ಷದ ಬಾಲಕಿ ಮೇಲೆ ಶಾಲೆಯಲ್ಲೇ ಅತ್ಯಾಚಾರವೆಸಗಲಾಗಿದ್ದು, ಆರೋಪಿ ಧರಿಸಿದ್ದ ಹಳದಿ ಶರ್ಟ್ ಸಹಾಯದಿಂದ ಆತನನ್ನು ಈಗ ಬಂಧಿಸಲಾಗಿದೆ.

ಪ್ರಕರಣದ ವಿವರ: ಬಾಲಕಿ ಪೋಷಕರು ಎಂ ಸಿ ಡಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂತ್ರಸ್ತೆ ಸೇರಿದಂತೆ ತಮ್ಮ ಇಬ್ಬರು ಮಕ್ಕಳೊಂದಿಗೆ ಅಲ್ಲಿಯೇ ವಾಸವಾಗಿದ್ದರು. ಶಾಲೆಯನ್ನು ಕಳೆದ ಕೆಲವು ದಿನಗಳಿಂದ ಮುಚ್ಚಲಾಗಿತ್ತು ಎನ್ನಲಾಗಿದ್ದು, ಘಟನೆ ನಡೆದ ದಿನ ಪೋಷಕರು ಮಕ್ಕಳನ್ನು ಬಿಟ್ಟು ವೇತನ ಪಡೆಯಲು ಹೊರ ಹೋಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಕಳ್ಳತನ ಮಾಡಲು ಅಲ್ಲಿಗೆ 27 ವರ್ಷದ ವಿವಾಹಿತ ವ್ಯಕ್ತಿ ಮೋನು ಎಂಬಾತ ನುಗ್ಗಿದ್ದು, ಬೆಲೆಬಾಳುವ ವಸ್ತು ದೋಚುವುದರ ಜೊತೆಗೆ ಚಾಕು ತೋರಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದರು.

ವಿಚಾರಣೆ ವೇಳೆ ಬಾಲಕಿ ಆರೋಪಿ ಹಳದಿ ಬಣ್ಣದ ಶರ್ಟ್ ಧರಿಸಿದ್ದ ಕುರಿತು ಮಾಹಿತಿ ನೀಡಿದ್ದಳು. ಅಲ್ಲದೆ ಸಿಸಿ ಟಿವಿಯಲ್ಲೂ ಅಸ್ಪಷ್ಟವಾಗಿ ಆತನ ಚಹರೆ ದಾಖಲಾಗಿತ್ತು. ವ್ಯಾಪಕ ತನಿಖೆ ಕೈಗೊಂಡ ಪೊಲೀಸರು ಅಂತಿಮವಾಗಿ ಆರೋಪಿಯನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular