HomeKarnatakaBIG NEWS: 15ನೇ ವಿಧಾನಸಭೆ ಕೊನೆಯ ಅಧಿವೇಶನಕ್ಕೆ ತೆರೆ; ವಿಧಾನಸಭೆಯ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

BIG NEWS: 15ನೇ ವಿಧಾನಸಭೆ ಕೊನೆಯ ಅಧಿವೇಶನಕ್ಕೆ ತೆರೆ; ವಿಧಾನಸಭೆಯ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು: ವಿಧಾನಸಭೆಯ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದು, 15ನೇ ವಿಧಾನಮಂಡಲದ ಕೊನೆಯ ಅಧಿವೇಶನಕ್ಕೆ ತೆರೆಬಿದ್ದಂತಾಗಿದೆ.

ಅಧಿವೇಶನದ ಕೊನೆಯ ದಿನವಾದ ಇಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ವಿದಾಯದ ಭಾಷಣ ಮಾಡಿದರು. ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಮಾತನಾಡಿದರು. ಯಡಿಯೂರಪ್ಪನವರ ರಾಜಕೀಯ ಸೇವೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಡಿಯೂರಪ್ಪನವರಿಗೆ ಸದನದಿಂದ ವಿದಾಯ ಹೇಳಿದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೊನೆ ಅಧಿವೇಶನದ ಬಗ್ಗೆ ಮಾತನಾಡುತ್ತಾ ತುಸು ಗದ್ಗದಿತರಾದರು. ರಾಷ್ಟ್ರಗೀತೆಯೊಂದಿಗೆ 15ನೇ ವಿಧಾನಸಭೆಯ ಕಲಾಪವನ್ನು ಮುಕ್ತಾಯಗೊಳಿಸಲಾಯಿತು. ಸ್ಪೀಕರ್ ಕಾಗೇರಿ ಸದನದ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.

For Latest News Updates, Join Our Whatsapp Community🚩
RELATED ARTICLES

Most Popular