HomeLatest NewsBIG NEWS : ವಸತಿ ಹಂಚಿಕೆಯಲ್ಲಿ ಮುಸಲ್ಮಾನರಿಗೆ 15% ಮೀಸಲಾತಿ : ರಾಜ್ಯ ಸರ್ಕಾರದ...

BIG NEWS : ವಸತಿ ಹಂಚಿಕೆಯಲ್ಲಿ ಮುಸಲ್ಮಾನರಿಗೆ 15% ಮೀಸಲಾತಿ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ

ಬೆಂಗಳೂರು : ವಸತಿ ಹಂಚಿಕೆಯಲ್ಲಿ ಮುಸಲ್ಮಾನರಿಗೆ 15% ಮೀಸಲಾತಿ ನೀಡಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ ವಸತಿ ಇಲಾಖೆಯ ವಸತಿ ಹಂಚಿಕೆಯಲ್ಲಿ ಮುಸಲ್ಮಾನರಿಗೆ 15% ಮೀಸಲಾತಿ ನೀಡಲು ನಿರ್ಧರಿಸಿರುವುದು ಅಸಂವಿಧಾನಿಕ ನಡೆಯಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಇತರೆ ವರ್ಗ, ಸಮುದಾಯಗಳಿಗೆ ಅನ್ಯಾಯವಾಗಲಿದೆ. ಕಾಂಗ್ರೆಸ್ ಸರ್ಕಾರದ ಈ ನಡೆಯ ವಿರುದ್ಧ ನಾವು ಕಾನೂನು ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದಿದೆ.

ಸಂವಿಧಾನಕ್ಕೆ ಅಪಚಾರ ಬಗೆಯಲು ಸದಾ ಸಿದ್ದ @INCKarnataka ಸರ್ಕಾರ!! ಧರ್ಮಾಧಾರಿತವಾಗಿ ಮೀಸಲಾತಿ ನೀಡಬಾರದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅದನ್ನು ಪದೇ ಪದೇ ಉಲ್ಲಂಘಿಸುತ್ತಿದೆ. ವಸತಿ ಯೋಜನೆಯಡಿ ಮುಸ್ಲಿಮರಿಗೆ ಪ್ರತ್ಯೇಕವಾಗಿ 15% ಮೀಸಲಾತಿ ನೀಡಿರುವುದು ಸಂಪೂರ್ಣ ಸಂವಿಧಾನ ವಿರೋಧಿ. ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಹೋಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿರುವ ಕಾಂಗ್ರೆಸ್, ಈ ವಿಷಯದಲ್ಲಿಯೂ ಸಹ ಛೀಮಾರಿ ಹಾಕಿಸಿಕೊಳ್ಳುತ್ತದೆ. ಭಂಡ ಹಾಗೂ ಭ್ರಷ್ಟರ ಓಲೈಕೆ ರಾಜಕಾರಣದ ಪರಾಕಾಷ್ಠೆ ಎಂದು ಬಿಜೆಪಿ ಟ್ವೀಟ್ ನಲ್ಲಿ ಅಸಮಾಧಾನ ಹೊರ ಹಾಕಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular