HomeKarnatakaಸಾರಿಗೆ ನೌಕರರ ಮೂಲ ವೇತನದಲ್ಲಿ ಶೇ. 12.50ರಷ್ಟು ಹೆಚ್ಚಳ: ಸರ್ಕಾರ ಆದೇಶ

ಸಾರಿಗೆ ನೌಕರರ ಮೂಲ ವೇತನದಲ್ಲಿ ಶೇ. 12.50ರಷ್ಟು ಹೆಚ್ಚಳ: ಸರ್ಕಾರ ಆದೇಶ

ಬೆಂಗಳೂರು: ರಾಜ್ಯದ 4 ಸಾರಿಗೆ ನಿಗಮಗಳ ನೌಕರರ ಮೂಲ ವೇತನದಲ್ಲಿ ಶೇ. 12.50 ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

KSRTC, BMTC, KKRTC, NWKRTC ಸಾರಿಗೆ ಸಂಸ್ಥೆಗಳ ನೌಕರರ ದೀರ್ಘಕಾಲದ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು ವೇತನ ಹೆಚ್ಚಳ ಮಾಡಿದೆ.

2025ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಲಾಗಿದೆ. ಮಾರ್ಚ್ 31, 2025ರ ಅಂತ್ಯಕ್ಕೆ ನೌಕರರು ಪಡೆಯುತ್ತಿದ್ದ ಮೂಲವೇತನಕ್ಕೆ ಈ ಹೆಚ್ಚಳ ಅನ್ವಯವಾಗಲಿದ್ದು, ಪರಿಷ್ಕೃತ ವೇತನ ಶ್ರೇಣಿಯು ಮಾರ್ಚ್ 31, 2029 ರವರೆಗೆ ಜಾರಿಯಲ್ಲಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೇತನ ಹೆಚ್ಚಳದ ಹಣ ಜುಲೈ 1, 2026 ರಿಂದ ನೌಕರರ ಮಾಸಿಕ ವೇತನದೊಂದಿಗೆ ಪಾವತಿಸಲಾಗುವುದು. ಏಪ್ರಿಲ್ 1, 2025ರಿಂದ ಜೂನ್ 30, 2026ರವರೆಗಿನ 15 ತಿಂಗಳ ಹಿಂಬಾಕಿಯನ್ನು ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹಂತ ಹಂತವಾಗಿ ಪಾವತಿಸಲಾಗುವುದು ಎಂದು ಹೇಳಲಾಗಿದೆ.

ಈ ವೇತನ ಹೆಚ್ಚಳದಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು 72.80 ಕೋಟಿ ರೂ., ವಾರ್ಷಿಕ 873.64 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ. ಒಟ್ಟು 1.05 ಲಕ್ಷ ಸಿಬ್ಬಂದಿಗೆ ವೇತನ ಹೆಚ್ಚಳ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular