HomeCrimeBIG NEWS: ಸಹಪಾಠಿ ಉತ್ತರ ಪತ್ರಿಕೆ ತೋರಿಸಿಲ್ಲ ಎಂದು ಚಾಕುವಿಂದ ಇರಿದ ವಿದ್ಯಾರ್ಥಿಗಳು

BIG NEWS: ಸಹಪಾಠಿ ಉತ್ತರ ಪತ್ರಿಕೆ ತೋರಿಸಿಲ್ಲ ಎಂದು ಚಾಕುವಿಂದ ಇರಿದ ವಿದ್ಯಾರ್ಥಿಗಳು

ಥಾಣೆ: ಪರೀಕ್ಷೆ ವೇಳೆ ತನ್ನ ಸಹಪಾಠಿ ಉತ್ತರ ಪತ್ರಿಕೆ ತೋರಿಸಿಲ್ಲ ಎಂದು ವಿದ್ಯಾರ್ಥಿಗಳು ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಇಲ್ಲಿನ ಭೀವಂಡಿ ಪಟ್ಟದ 10ನೇ ತರಗತಿಯ ಲಿಖಿತ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಯನ್ನು ತೋರಿಸಲು ನಿರಾಕರಿಸಿದ ಕಾರಣ ಮೂವರು ವಿದ್ಯಾರ್ಥಿಗಳು ಸಹಪಾಹಿ ಮೇಳೆ ಹಲ್ಲೆ ನಡೆಸಿದ್ದಾರೆ.

ಪರೀಕ್ಷೆ ಮುಗಿದು ಹೊರಬರುತ್ತಿದ್ದಂತೆ ಸಹಪಾಠಿಯನ್ನು ಹಿಡಿದು ಥಳಿಸಿದ ವಿದ್ಯಾರ್ಥಿಗಳು ಚಾಕುವಿನಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular