HomeLatest News10 ಗಂಟೆಗಳ ಸಂದರ್ಶನ, ಕೊನೆಯ 10 ನಿಮಿಷದಲ್ಲಿ ಶಾಕ್ ಟೆಕ್ಕಿಯ ಉತ್ತರಕ್ಕೆ ರೆಡ್ ಫ್ಲಾಗ್ ಎಂದ...

10 ಗಂಟೆಗಳ ಸಂದರ್ಶನ, ಕೊನೆಯ 10 ನಿಮಿಷದಲ್ಲಿ ಶಾಕ್ ಟೆಕ್ಕಿಯ ಉತ್ತರಕ್ಕೆ ರೆಡ್ ಫ್ಲಾಗ್ ಎಂದ ಸಂಸ್ಥಾಪಕ

ಬೆಂಗಳೂರು: ತಾಂತ್ರಿಕ ಕ್ಷೇತ್ರದಲ್ಲಿ ಸಂದರ್ಶನ ಎಂದರೆ ಕೇವಲ ಜ್ಞಾನ ಪರೀಕ್ಷೆಯಲ್ಲ, ಅದು ವ್ಯಕ್ತಿತ್ವ ಮತ್ತು ತಾಳ್ಮೆಯ ಪರೀಕ್ಷೆಯೂ ಹೌದು. ಆದರೆ, 10 ಗಂಟೆಗಳ ಸುದೀರ್ಘ ಆಯ್ಕೆ ಪ್ರಕ್ರಿಯೆಯ ನಂತರ, ಅಭ್ಯರ್ಥಿಯೊಬ್ಬರು ನೀಡಿದ ಒಂದು ಸ್ಪಷ್ಟನೆ ರೆಡ್ ಫ್ಲಾಗ್ ಎಂದು ಕರೆದು ಕೆಲಸ ನಿರಾಕರಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಏನಿದು ಘಟನೆ?

ಸುಮಾರು ಮೂರು ವರ್ಷಗಳ ಅನುಭವ ಹೊಂದಿರುವ ಫ್ಲಟರ್ (Flutter) ಡೆವಲಪರ್ ಒಬ್ಬರು ಯುರೋಪ್ ಮೂಲದ ಕಂಪನಿಯೊಂದರಲ್ಲಿ ರಿಮೋಟ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಹಂತ ಹಂತವಾಗಿ ನಡೆದ ಸಂದರ್ಶನದಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂದರ್ಶನದ ಹಂತಗಳು:

ಹಂತ 1: ಪ್ರಾಜೆಕ್ಟ್ ವಿವರಣೆಯ ವಿಡಿಯೋ ರೆಕಾರ್ಡಿಂಗ್

ಹಂತ 2: 20 ನಿಮಿಷಗಳ ಸ್ಕ್ರೀನಿಂಗ್ ಕಾಲ್

ಹಂತ 3: 8 ಗಂಟೆಗಳ ಕಠಿಣ ಅಸೈನ್‌ಮೆಂಟ್ (10ಕ್ಕೆ 8 ಅಂಕ ಪಡೆದಿದ್ದರು)

ಒಟ್ಟು ಪ್ರಕ್ರಿಯೆ ಸುಮಾರು 10 ಗಂಟೆಗಳವರೆಗೆ ಸಾಗಿತ್ತು.

ಕೊನೆಯ 10 ನಿಮಿಷದಲ್ಲಿ ಬದಲಾದ ಕಥೆ

ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ, ಕಂಪನಿಯ ಸಂಸ್ಥಾಪಕರ ಜೊತೆ ಅಂತಿಮ ಸುತ್ತು ನಡೆಯಿತು. ಅಲ್ಲಿ ಅಸೈನ್‌ಮೆಂಟ್ ಬಗ್ಗೆ ನೀಡಲಾದ ಫೀಡ್‌ಬ್ಯಾಕ್ ಕುರಿತು ಪ್ರಶ್ನೆ ಕೇಳಲಾಯಿತು.

ಅದಕ್ಕೆ ಅಭ್ಯರ್ಥಿ,ನಾನು ಫೀಡ್‌ಬ್ಯಾಕ್ ಅನ್ನು ಭಾಗಶಃ ಒಪ್ಪುತ್ತೇನೆ (Somewhat agree)ಎಂದು ಉತ್ತರಿಸಿದರು. ಜೊತೆಗೆ, ಮೊಬೈಲ್ ಮತ್ತು ವೆಬ್ ಪ್ಲಾಟ್‌ಫಾರ್ಮ್‌ಗಳ ನಡುವಿನ ತಾಂತ್ರಿಕ ವ್ಯತ್ಯಾಸದ ಬಗ್ಗೆ ಸಣ್ಣ ಸ್ಪಷ್ಟನೆ ನೀಡಲು ಪ್ರಯತ್ನಿಸಿದರು.

ಆದರೆ, ಈ ಉತ್ತರ ಸಂಸ್ಥಾಪಕರಿಗೆ ಇಷ್ಟವಾಗಲಿಲ್ಲ. ತಕ್ಷಣವೇ ಅವರು,“ನಿಮಗೆ ವಿಮರ್ಶೆಯನ್ನು ಸ್ವೀಕರಿಸಲು ಬರುವುದಿಲ್ಲ. ಇದು ದೊಡ್ಡ ರೆಡ್ ಫ್ಲಾಗ್”
ಎಂದು ಹೇಳಿ ಸಂದರ್ಶನವನ್ನು ಅಲ್ಲಿಗೇ ಅಂತ್ಯಗೊಳಿಸಿದರು.

ಸೋಷಿಯಲ್ ಮೀಡಿಯಾ ರಿಯಾಕ್ಷನ್ ಹೇಗಿದೆ?

ಈ ಅನುಭವವನ್ನು ಅಭ್ಯರ್ಥಿ ರೆಡ್ಡಿಟ್‌ನಲ್ಲಿ ಹಂಚಿಕೊಂಡ ಬಳಿಕ ಸಾವಿರಾರು ನೆಟ್ಟಿಗರು ಕಂಪನಿಯ ಧೋರಣೆಯನ್ನು ಟೀಕಿಸಿದ್ದಾರೆ.

ನೀವು ಬಚಾವಾದ್ರಿ ಇಂತಹ ಸಣ್ಣ ವಿಷಯಕ್ಕೆ ಗರಂ ಆಗುವ ಬಾಸ್ ಹತ್ತಿರ ಕೆಲಸ ಮಾಡುವುದಕ್ಕಿಂತ ಮೊದಲೆ ಇವತ್ತು ನಿಜ ಬಣ್ಣ ಗೊತ್ತಾಗಿದ್ದು ಒಳ್ಳೆದಾಯ್ತು” ಅಂತ ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಸಂಸ್ಥಾಪಕನೇ ರೆಡ್ ಫ್ಲಾಗ್ ಪ್ರಶ್ನೆ ಕೇಳುವುದು, ತಾಂತ್ರಿಕ ಸ್ಪಷ್ಟನೆ ನೀಡುವುದು ಒಬ್ಬ ಸಮರ್ಥ ಇಂಜಿನಿಯರ್‌ನ ಗುಣ. ಅದನ್ನು ತಪ್ಪು ಎಂದು ಪರಿಗಣಿಸುವ ಸಂಸ್ಥಾಪಕರ ಧೋರಣೆಯೇ ಸಮಸ್ಯೆ ಎಂದು ಟೀಕಿಸಿದ್ದಾರೆ.

ಅಭ್ಯರ್ಥಿಗೆ ಒಲವು 10 ಗಂಟೆಗಳ ಶ್ರಮಕ್ಕೆ ಕನಿಷ್ಠ ಗೌರವ ಕೊಡದ ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಇಂಟರ್ವ್ಯೂ ಎನ್ನುವುದು ನಾವು ಕಂಪನಿಯನ್ನು ಪರೀಕ್ಷಿಸಲು ಇರುವ ಅವಕಾಶವೂ ಹೌದು. ಇಂತಹ ಇಗೋ ಇರೋ ಕಡೆ ಸೇರದಿರುವುದೇ ಲೇಸು

ಸೀನಿಯರ್ ರೋಲ್‌ನಲ್ಲಿ ಚರ್ಚೆ ಮಾಡೋದು, ಪ್ರಶ್ನೆ ಕೇಳೋದು ಕಾಮನ್. ಅದನ್ನ ತಡೆಯೋ ಕಂಪನಿ ಕಲ್ಚರ್ ಸರಿಯಿಲ್ಲ” ಅನ್ನೋದು ಬಹುತೇಕರ ವಾದ.

Feedback Culture ಹೇಗಿರಬೇಕು?

ಈ ಘಟನೆ ಕಾರ್ಪೊರೇಟ್ ಜಗತ್ತಿನಲ್ಲಿ Feedback Culture ಎಷ್ಟು ಸೂಕ್ಷ್ಮ ಹಾಗೂ ಸಮತೋಲನದಿಂದ ನಿರ್ವಹಿಸಬೇಕೆಂಬುದನ್ನು ಮತ್ತೆ ನೆನಪಿಸಿದೆ. ವಿಮರ್ಶೆಯನ್ನು ಸ್ವೀಕರಿಸುವ ಸಾಮರ್ಥ್ಯ ಮುಖ್ಯವಾದರೂ, ಸ್ಪಷ್ಟನೆ ನೀಡುವ ಹಕ್ಕು ಕೂಡ ಅಷ್ಟೇ ಮುಖ್ಯ.

ಈ ಪ್ರಕರಣದಲ್ಲಿ ಅಭ್ಯರ್ಥಿಯ ಪ್ರಾಮಾಣಿಕತೆ ಅವರಿಗೆ ಕೆಲಸ ಕಳೆದುಕೊಳ್ಳುವಂತೆ ಮಾಡಿರಬಹುದು. ಆದರೆ ನೆಟ್ಟಿಗರ ಅಭಿಪ್ರಾಯದ ಪ್ರಕಾರ, ಅವರು ಬಹುಶಃ ಒಂದು ವಿಷಕಾರಿ ಕಾರ್ಯಸಂಸ್ಕೃತಿಯಿಂದ ಪಾರಾಗಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular