HomeCrimeವಿದೇಶದಿಂದ ಅಕ್ರಮವಾಗಿ 10 ಅನಕೊಂಡ ಹಾವುಗಳ ಕಳ್ಳಸಾಗಾಟ; ಹಾವುಗಳ ಸಮೇತ ಸಿಕ್ಕಿಬಿದ್ದ ಪ್ರಯಾಣಿಕ ಅರೆಸ್ಟ್

ವಿದೇಶದಿಂದ ಅಕ್ರಮವಾಗಿ 10 ಅನಕೊಂಡ ಹಾವುಗಳ ಕಳ್ಳಸಾಗಾಟ; ಹಾವುಗಳ ಸಮೇತ ಸಿಕ್ಕಿಬಿದ್ದ ಪ್ರಯಾಣಿಕ ಅರೆಸ್ಟ್

ಬೆಂಗಳೂರು: ಬ್ಯಾಂಕಾಕ್ ನಿಂದ ಅಕ್ರಮವಾಗಿ 10 ಅನಕೊಂಡ ಹಾವುಗಳನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬ್ಯಾಂಕಾಕ್ ನಿಂದ ಕೆಐಎಗೆ ಬಂದಿಳಿದ ಪ್ರಯಾಣಿಕನ ಲಗೇಜ್ ಬ್ಯಾಗ್ ಗಳನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಹತ್ತು ಹಳದಿ ಬಣ್ಣದ ಅನಕೊಂಡ ಹಾವುಗಳು ಪತ್ತೆಯಾಗಿವೆ.

ತಕ್ಷಣ ಪ್ರಯಾಣಿಕನನ್ನು ಹಾಗೂ ಹಾವುಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಹಾವುಗಳನ್ನು ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವನ್ಯಜೀವಿಗಳ ಕಳ್ಳ ಸಾಗಾಣೆ ಆರೋಪದಡಿ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular