10 ವರ್ಷಗಳ ಅವಧಿಯಲ್ಲಿ ಈ ಹೆಲಿಪ್ಯಾಡ್ ಗೆ ಬಂದಿದ್ದು ಎರಡೇ ಹೆಲಿಕಾಪ್ಟರ್; ಉಳಿದ ಅವಧಿಯಲ್ಲಿ ಒಕ್ಕಲು ಕಣವಾಗಿ ಪರಿವರ್ತನೆ

ಸಾರ್ವಜನಿಕ ಹಣ ಹೇಗೆ ಪೋಲಾಗುತ್ತದೆ ಎಂಬ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಇದಕ್ಕೆ ಈಗ ಮತ್ತೊಂದು ಸೇರ್ಪಡೆ ಎಂಬಂತೆ 10 ವರ್ಷಗಳ ಹಿಂದೆ ನಿರ್ಮಾಣಗೊಂಡ ಹೆಲಿಪ್ಯಾಡ್ ಒಂದು ಈ ಅವಧಿಯಲ್ಲಿ ಕೇವಲ ಎರಡು ಬಾರಿ ಮೂಲ ಉದ್ದೇಶಕ್ಕೆ ಬಳಕೆಯಾಗಿದೆ. ಅಂದರೆ ಈವರೆಗೆ ಎರಡು ಹೆಲಿಕ್ಯಾಪ್ಟರ್ ಗಳು ಮಾತ್ರ ಇಲ್ಲಿ ಬಂದು ಇಳಿದಿದ್ದು, ಅದು ಕೂಡಾ ಚುನಾವಣಾ ಪ್ರಚಾರದ ಸಮಯದಲ್ಲಿ ಎಂಬುದು ಗಮನಾರ್ಹ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನಲ್ಲಿ ಹತ್ತು ವರ್ಷದ ಹಿಂದೆ ಲೋಕೋಪಯೋಗಿ ಇಲಾಖೆ ವತಿಯಿಂದ ಹಾನಗಲ್ ರಸ್ತೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಇಲ್ಲಿಗೆ 2018ರ ಏಪ್ರಿಲ್ 12ರಂದು ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದು, ಈ ಹೆಲಿಪ್ಯಾಡ್ ಗೆ ಬಂದಿಳಿದ ಮೊದಲಿಗರು ಎನಿಸಿಕೊಂಡಿದ್ದರು.

ಇದಾದ ಬಳಿಕ ಅಂದರೆ ಬುಧವಾರದಂದು ಖ್ಯಾತ ನಟ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಪರ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ನಲ್ಲಿ ಇಲ್ಲಿ ಬಂದಿಳಿದಿದ್ದಾರೆ. ಈ ಮೂಲಕ ಕುಮಾರಸ್ವಾಮಿಯವರ ನಂತರ ಈ ಹೆಲಿಪ್ಯಾಡ್ ಬಳಸಿಕೊಂಡ ಎರಡನೇಯವರಾಗಿದ್ದಾರೆ. ಇನ್ನುಳಿದಂತೆ ಈ ಹೆಲಿಪ್ಯಾಡ್ ಅನ್ನು ಸುತ್ತಲಿನ ರೈತರು ಒಕ್ಕಲು ಕಣಗಳಾಗಿ ಉಪಯೋಗಿಸುತ್ತಾರಲ್ಲದೇ, ಯುವಕರ ಕ್ರಿಕೆಟ್, ಮಕ್ಕಳ ಸೈಕಲ್ ಕಲಿಕೆಗೂ ಬಳಕೆಯಾಗಿದೆ. ಈ ಹೆಲಿಪ್ಯಾಡ್ ಗೆ ತಡೆಗೋಡೆ ನಿರ್ಮಿಸುವ ಪ್ರಸ್ತಾವನೆಯೂ ನೆನೆಗುದಿಗೆ ಬಿದ್ದಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read